Tuesday, January 24, 2017

ಕನಸು

ಪುಟ್ಟ ಹೃದಯದ ಮುಗ್ಧ ಸುಂದರಿ
ಕಾಣಲ್ತೆಸಿದಳು ಸುಂದರ ಕನಸನು,
ಕಂಡಳು ತನನ್ನೇ ಕನಸಲ್ಲಿ
ಹಾಡುತಾ ಆಡುತಾ ಸುಂದರ ಕುವರನೊಡನೆ :)

ಬೆಳಕು ಮುಡಲು ಕನಸು ಚದುರಿತು
ನೋಡುವ ಕಂಗಳು ಮಂಜಾಯ್ತು,
ಹುಡುಕಿದಳು ಕುವರನನ್ನು ಊರೆಲ್ಲಾ
ಕಾಣದೇ ಅವನನ್ನು ಅಳುತ ಹಾಡಿದಲು ಹಾಡೊಂದನು!!

ನಾ ಬರೆದ ಕವಿತೆಯ ನಾಯಕ
ಯಾರೊ ನೀ  ಆಗಂತುಕ??
ನಾ ಅನಾಮಿಕ, ನೀ ನನಗೆ ಆಕಸ್ಮಿಕ!

ಇಂತಿ ನಿಮ್ಮವ

Nವಿ

Wednesday, November 2, 2016

ದಾಸಿ ನಾನು


ಹಸಿದು ಬರುವ ಹೆಬ್ಬುಲಿಗಳ ಉಣಬಡಿಸುವವಳು, ನೋವೆಂದು ಬರುವ ಅಳುವ ಕಂಗಳ ಒರೆಸುವವಳು
ಕಾಡಿತ್ತು ನನಗೂ ಮನೆಯೆಂಬ ಆಸರೆ, ಹಾಡುವ ಕೋಗಿಲೆಯ ದನಿ ಕಿತ್ತು ಕುಣಿಯೆಂದು ಟೊಂಕ ಕಟ್ಟಿಸಿದ ಸಮಾಜ
ನೋವೆಂದು ಅಳುವಾಗ ಕಂಬನಿ ಒರೆಸಲು ಯಾರಿಲ್ಲಾ ಎನಗೆ, ಅಣ್ಣಾ ಎಂದರೆ ನಗುವ ಕುಹುಕ ಮುಖಗಳು, ನೋಡೆನ್ನ ಎಂದರೆ ಅರಳುವ ಕಂಗಳು, ಭಿಕ್ಷುಕಿ ನಾನ್ನಲ್ಲ, ನಿಮ್ಮ ಬಳಿ ಬೇಡಲು ಬಂದಿಲ್ಲ
ಸಾವಿಂದ ಆಚೆಗೆ, ಬದುಕಿನ ಒಳಗೆ ಉಸಿರಾಡುತಿರುವೇ, 
ಜಾರಿದ ಸೆರಗೆರಿಸುವ ಮುನ್ನ ಮಾನವೇ ಹೋಯಿತಣ್ಣಾ 

ವೇಶ್ಯೆ ನಾನಲ್ಲಾ
ನೋವು ನನಗಿಲ್ಲಾ

ಇಂತಿ ನಿಮ್ಮವ

Nವಿ

Friday, September 9, 2016

ಸಾವು !!!

ಬಂಧು ಬಳಗವೆಲ್ಲಾ ಬಂದಿಹರಿಂದು
ಅತ್ತು ಮಾಡಿ ಕರೆದರು ನಿನ್ನ
ಮಂಜಾದ ಕಣ್ಣಲ್ಲಿ ನೋಡಲೆತ್ನಿಸಿದೆ
ನೋಡುವೆಯ ಒಮ್ಮೆ ಎದ್ದು ನನ್ನ!!

ಘಳಿಗೆ ನಿದ್ದೆಗಾಗಿ ಕಣ್ಮುಚ್ಚಿದೆ ನೀನು
ಚಿರನಿದ್ರೆಯೇಕೆ ಆವರಸಿತು ಅಂದು
ಮಡಿಕೆ ಮಾಡಲೆತ್ನಿಸಿದ ಮನುಜ
ಆ ಮಡಿಕೆಯೊಳಗೆ ಹೊತ್ತೊಯ್ದರಲ್ಲೋ ನಿನ್ನ!!

ಬೆಳಕಾಗಲೆಂದು ಕಾಯುತ್ತಿದ ನಿನಗೆ
ತೋರಿದರಲ್ಲೋ ಬೆಂಕಿಯನ್ನಿತ್ತು ಬೆಳಕ
ಹನಿ ನೀರಿಗಾಗಿ ಹಾಹಾಕರಿಸಿದ್ದ ನಿನಗೆ
ಹನಿ ತುಪ್ಪ ಹಾಲು ಬಿಡಲು ಬಂದಿರುವ ಬಳಗವ ನೋಡೋ!!!

ಇಂತಿ ನಿಮ್ಮವ

Nವಿ

3 ದಿನದ ಬಾಳುರಕ್ಕಸನೋ ರಕ್ಷಕನೋ ಇರುವನೊಳಗೊಬ್ಬ
ಕಂಡಾಗ ನೋವು ಮರುಗುವನು ಇವನು
ನೀಡಲು ಕೈ ಬಾರದೆ ಮರುಗುವನು ಇವನು
ನೀಡಿದರೆ ತನ್ನ ಗತಿ ಏನೆಂದು??
ರಕ್ಕಸನೋ ಇವನು ರಕ್ಷಕನೋ!
ತನಗಿಲ್ಲದಿದ್ದರು ನೀಡುವನು ಇವನು
ದೇವನಿವನು ದಾನವನು
ಮರುಗಲಿಲ್ಲ ಕರಗಲಿಲ್ಲ ಒಮ್ಮೆಯು ಯೋಚಿಸಲಿಲ್ಲ,
ಕಾಯಲಿಲ್ಲ ಕಡೆಗಣಿಸಲಿಲ್ಲ
ದೇವನಿವನು ದಾನವನು!!
ಮನುಜನಿವನು ಮಾನವನು
ನೋಡಿದರು ಮರುಗಲಿಲ್ಲ, ಕೇಳಿದರು ಕೊಡಲಿಲ್ಲ
ಬೇಡಿದರು ಬಗ್ಗದೆ ಯಾರಿಗೂ  ಜಗ್ಗದೇ
ಹೊರಟಿಹನು ಅಹಂ ಮನುಜಾಸ್ಮಿ!!!
ಮನುಜನಿವನು ಮಾನವನುಇಂತಿ ನಿಮ್ಮವ

Nವಿ

ಬೆಳಕೆ

ಕಾಡುವ ಬೆಳಕೆ ಕಾಡೇನಾ ಓ ಬೆಳಕೆ,
ಕಾಡಲಿಲ್ಲವೆಕೇ ಓ ನನ್ನ ಬೆಳಕೆ,
ಕಾಡು ಬಾ ಓ ಕಾಡ್ಬೆಳಕೆ,


ಕಾಡುವಷ್ಟು ಕಾಡದಿರು
ಕಾಡದೆ ಹೋಗದಿರು
ಕಾಡಿಸಲೊಮ್ಮೆ ಕಾಡು ಬಾ ಓ ನನ್ನ ಬೆಳಕೆ
ಕಾಡದಿರೇ ನೀನು ಕಾಡುವರಾರಿನ್ನು


ಇಂತಿ ನಿಮ್ಮವ

ನV

Thursday, October 9, 2014

ಬೆನ್ನೆಲುಬು...

ಮಾಸಿದ ಅಂಗಿಯ ತೊಟ್ಟು
ಹಣೆಯ ಮೇಲೊಂದು ಕೈ ಇಟ್ಟು 
ರೈನ್-ಗಾಗಿ ಮೇಲೆ ನೋಡುವ ರೈತ ನಿನ್ನ ನೋಡುವವರಾರು??
ಊರಿಗೆ ಊಟ ಹಾಕುವ ಒಣಗಿರುವ ದೇಹಕ್ಕೆ ಊಟ ಹಾಕುವವರಾರೋ?
ದೇಶದ ಬೆನ್ನೆಲುಬು ನೀನು 
ನಿನ್ನ ಎಲುಬುಗಳು ಪುಡಿಯಾಗುವಾಗ ನೋಡುವವರಾರು?

ಇಂತಿ ನಿಮ್ಮವ

ನV

Wednesday, September 24, 2014

ಅಂಕಲ್....
ಆ ಹುಡ್ಗಾ ನಿನ್ನಾ ಅಂಕಲ್ ಅಂದ ಮಚ್ಚಾ ಹಹಾಹಾ!!!

ಎಷ್ಟು ಕಷ್ಟಾ ಅದನ್ನಾ ಅರಗಿಸಿಕೊಳೋದು.. ಮೀಸೆ ಗಡ್ಡ ಮೂಡಿದೊಡನೇ ಸಣ್ಣ ಹುಡುಗರು ಅಂಕಲ್ ಅಂದು ನಿಮ್ಮ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿ ಬಿಡುತ್ತಾರೆ..

ಜೊತೆಯಲ್ಲಿ ಗೆಳೆಯರಿದರೆ ಮುಗಿಯಿತ್ತು ಕಥೆ... ಅವರ ಕುಹುಕ ನಗು.. ಅರಗಿಸಿಕೊಳೋದಕ್ಕೆ ಸುಮಾರು ದಿನಗಳೇ ಬೇಕು...

ಇಂತಿ ನಿಮ್ಮವ

V

Tuesday, October 8, 2013

ಮುಖಪುಟ

ಜೀವನದ ಹಾದಿಯಲ್ಲಿ ಸಿಕ್ಕ ಜೊತೆಗಾರ್ತಿ ನೀನು
ಮುಖಪುಟದ ಚಿತ್ರವಾಗುವೆಯೆಂಬ ಆಸೆಯ ಅಳಿಸಿ
ಮುನ್ನುಡಿಯಲ್ಲೇ ಮುಗಿಸಿದೆ ಪಯಣ

ಮುಖವಾ ತೋರದೆ ಮೌನದಿ ಮಾತಾಡಿದೆ
ಹೆಜ್ಜೆಗಳೆಲ್ಲವೂ ಹಸಿರಾಗಿದೆ 
ನಿನ್ನ ಹೆಸರು ಹಚ್ಚೆಯಾಗಿ 
ಮನದಲ್ಲಿ ಹಚ್ಚ ಹಸಿರಾಗಿದೆ


ಇಂತಿ ನಿಮ್ಮವ

Nವಿ.....

Monday, October 7, 2013

ಮುಪ್ಪು

ಬಾರದ ಸಾವು
ಮುಗಿಯದ ನೋವು
ಕಾಣದ ನಲಿವು

ಕಾಣುತ್ತಿದೆ ಕಣ್ಣಿಗೆ ಬೆಳಕು
ಅದರ ಹಿಂದೆಯೇ ಕಾಣದಷ್ಟು ಕತ್ತಲು

ಮಾಡಿದೆ ಉಪವಾಸ
ಕಾಣಲು ಕೈಲಾಸ
ಬಾರದೇ ಸಾವು
ಮುಪ್ಪಿಗೆ ಕೊಟ್ಟಿದೇ ನೋವುಇಂತಿ ನಿಮ್ಮವ

V