Wednesday, November 2, 2016

ದಾಸಿ ನಾನು


ಹಸಿದು ಬರುವ ಹೆಬ್ಬುಲಿಗಳ ಉಣಬಡಿಸುವವಳು, ನೋವೆಂದು ಬರುವ ಅಳುವ ಕಂಗಳ ಒರೆಸುವವಳು
ಕಾಡಿತ್ತು ನನಗೂ ಮನೆಯೆಂಬ ಆಸರೆ, ಹಾಡುವ ಕೋಗಿಲೆಯ ದನಿ ಕಿತ್ತು ಕುಣಿಯೆಂದು ಟೊಂಕ ಕಟ್ಟಿಸಿದ ಸಮಾಜ
ನೋವೆಂದು ಅಳುವಾಗ ಕಂಬನಿ ಒರೆಸಲು ಯಾರಿಲ್ಲಾ ಎನಗೆ, ಅಣ್ಣಾ ಎಂದರೆ ನಗುವ ಕುಹುಕ ಮುಖಗಳು, ನೋಡೆನ್ನ ಎಂದರೆ ಅರಳುವ ಕಂಗಳು, ಭಿಕ್ಷುಕಿ ನಾನ್ನಲ್ಲ, ನಿಮ್ಮ ಬಳಿ ಬೇಡಲು ಬಂದಿಲ್ಲ
ಸಾವಿಂದ ಆಚೆಗೆ, ಬದುಕಿನ ಒಳಗೆ ಉಸಿರಾಡುತಿರುವೇ, 
ಜಾರಿದ ಸೆರಗೆರಿಸುವ ಮುನ್ನ ಮಾನವೇ ಹೋಯಿತಣ್ಣಾ 

ವೇಶ್ಯೆ ನಾನಲ್ಲಾ
ನೋವು ನನಗಿಲ್ಲಾ

ಇಂತಿ ನಿಮ್ಮವ

Nವಿ

Friday, September 9, 2016

ಸಾವು !!!

ಬಂಧು ಬಳಗವೆಲ್ಲಾ ಬಂದಿಹರಿಂದು
ಅತ್ತು ಮಾಡಿ ಕರೆದರು ನಿನ್ನ
ಮಂಜಾದ ಕಣ್ಣಲ್ಲಿ ನೋಡಲೆತ್ನಿಸಿದೆ
ನೋಡುವೆಯ ಒಮ್ಮೆ ಎದ್ದು ನನ್ನ!!

ಘಳಿಗೆ ನಿದ್ದೆಗಾಗಿ ಕಣ್ಮುಚ್ಚಿದೆ ನೀನು
ಚಿರನಿದ್ರೆಯೇಕೆ ಆವರಸಿತು ಅಂದು
ಮಡಿಕೆ ಮಾಡಲೆತ್ನಿಸಿದ ಮನುಜ
ಆ ಮಡಿಕೆಯೊಳಗೆ ಹೊತ್ತೊಯ್ದರಲ್ಲೋ ನಿನ್ನ!!

ಬೆಳಕಾಗಲೆಂದು ಕಾಯುತ್ತಿದ ನಿನಗೆ
ತೋರಿದರಲ್ಲೋ ಬೆಂಕಿಯನ್ನಿತ್ತು ಬೆಳಕ
ಹನಿ ನೀರಿಗಾಗಿ ಹಾಹಾಕರಿಸಿದ್ದ ನಿನಗೆ
ಹನಿ ತುಪ್ಪ ಹಾಲು ಬಿಡಲು ಬಂದಿರುವ ಬಳಗವ ನೋಡೋ!!!

ಇಂತಿ ನಿಮ್ಮವ

Nವಿ

3 ದಿನದ ಬಾಳು



ರಕ್ಕಸನೋ ರಕ್ಷಕನೋ ಇರುವನೊಳಗೊಬ್ಬ
ಕಂಡಾಗ ನೋವು ಮರುಗುವನು ಇವನು
ನೀಡಲು ಕೈ ಬಾರದೆ ಮರುಗುವನು ಇವನು
ನೀಡಿದರೆ ತನ್ನ ಗತಿ ಏನೆಂದು??
ರಕ್ಕಸನೋ ಇವನು ರಕ್ಷಕನೋ!




ತನಗಿಲ್ಲದಿದ್ದರು ನೀಡುವನು ಇವನು
ದೇವನಿವನು ದಾನವನು
ಮರುಗಲಿಲ್ಲ ಕರಗಲಿಲ್ಲ ಒಮ್ಮೆಯು ಯೋಚಿಸಲಿಲ್ಲ,
ಕಾಯಲಿಲ್ಲ ಕಡೆಗಣಿಸಲಿಲ್ಲ
ದೇವನಿವನು ದಾನವನು!!




ಮನುಜನಿವನು ಮಾನವನು
ನೋಡಿದರು ಮರುಗಲಿಲ್ಲ, ಕೇಳಿದರು ಕೊಡಲಿಲ್ಲ
ಬೇಡಿದರು ಬಗ್ಗದೆ ಯಾರಿಗೂ  ಜಗ್ಗದೇ
ಹೊರಟಿಹನು ಅಹಂ ಮನುಜಾಸ್ಮಿ!!!
ಮನುಜನಿವನು ಮಾನವನು



ಇಂತಿ ನಿಮ್ಮವ

Nವಿ

ಬೆಳಕೆ

ಕಾಡುವ ಬೆಳಕೆ ಕಾಡೇನಾ ಓ ಬೆಳಕೆ,
ಕಾಡಲಿಲ್ಲವೆಕೇ ಓ ನನ್ನ ಬೆಳಕೆ,
ಕಾಡು ಬಾ ಓ ಕಾಡ್ಬೆಳಕೆ,










ಕಾಡುವಷ್ಟು ಕಾಡದಿರು
ಕಾಡದೆ ಹೋಗದಿರು
ಕಾಡಿಸಲೊಮ್ಮೆ ಕಾಡು ಬಾ ಓ ನನ್ನ ಬೆಳಕೆ
ಕಾಡದಿರೇ ನೀನು ಕಾಡುವರಾರಿನ್ನು


ಇಂತಿ ನಿಮ್ಮವ

ನV