Thursday, October 4, 2012

ಹೇಡಿ ಬದುಕು ನನ್ನದು


ಅಬ್ಬಬ್ಬಾ ಇದು ಕಡೆಯ ಮಾತ್ರೆ ಇದನ್ನು ನುಂಗಿದರೆ ಬೆಳಗ್ಗೆ ನಾನು ಇರುವುದಿಲ್ಲ!! ಎಂದು ಕಡೆಯ ಮಾತ್ರೆಯನ್ನು ಬಾಯಲಿಟ್ಟು ನೀರು ಸುರಿದುಕೊಂಡೆ. ಮನೆಗೆ ಬಂದು ತಣ್ಣಗೆ ಫ್ಯಾನ್ ಗಾಳಿಗೆ ಹಾಗೆ ಮಂಚಕ್ಕೊರಗಿದ ನನಗೆ ಹಾಗೆ ಹಳೆಯ ನೆನಪುಗಳಾವರಿಸತೊಡಗಿತು
.
.
.
.
.

ನನ್ನ ಶಾಲಾ ದಿನಗಳಲ್ಲಿ ನನ್ನ ಅಪ್ಪ, ಅವರ ಟಿವಿಸ್ ಹೆವಿ ಡ್ಯುಟಿ ಮೇಲೆ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದದ್ದು, 

ಸುಮ್ಮನೇ ಹೊಟ್ಟೆ ನೋವು ಎಂದರು ಸಹಾ ಶಾಲೆಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಳ್ಳುತಿದ್ದದು ನನಗೆ ಬೇಕು ಎಂದದ್ದನನ್ನು ಎಂದೂ ಇಲ್ಲವೆನದೆ ತಂದುಕೊಡುತ್ತಿದ್ದದ್ದೆಲ್ಲ ನೆನಪಾಯ್ತು

ಕಣ್ಣ ತುದಿ ಒದ್ದೆಯಾಗತೊಡಗಿತು......

ಮತ್ತೆ ನನ್ನ ಹುಡುಗಿ ನೆನಪದಳು ಛೇ!! ಅವಳು ಇಲ್ಲಾ ನೀ ನನಗೆ ಬೇಡ ಎಂದು ಛೀಕರಿಸಿದ ಮೇಲು ಈ ಬಾಳು ನನಗೇಕೇ?? ನನ್ನ ನಿರ್ಧಾರ ಸರಿಯಾಗಿದೆ ಎಂದೆನಿಸಿತು.

ತಲೆಯನ್ನು ದಿಂಬಿಗೊರಗಿಸಿದೆ ಫ್ಯಾನ್ ಓಡುತಾ ಇರುವಂತೆ ನನ್ನ ಆಲೋಚನೆಗಳು ಓಡತೊಡಗಿತು..

ಕಾಲೇಜ್ ದಿನಗಳಲ್ಲಿ ನಾನು ಹಠಾ ಮಾಡಿದೆ ಎಂದು ಮನೆಯಲ್ಲಿ ಎಷ್ಟೇ ಕಷ್ಟವಿದರೂ ಸಹಾ ನನಗೆ ಅಂತ ಅಪ್ಪ ಪ್ರೀತಿಯಿಂದ ಸ್ಯಾಮ್ಸಂಗ್  R210 ಮೊಬೈಲ್ ಕೊಡಿಸಿದ್ದರು, ನನ್ನ ಶೋಕಿಗೆ ಎಂದು ಇಲ್ಲವೆನದೆ ಕೇಳಿದ ಬಟ್ಟೆ ಬರೆಯನ್ನು ಕೊಡಿಸುತ್ತಿದರು, 

ಆ!!!! ಆ ಬಟ್ಟೆ ಬರೆಗಳನೇ ಅಲ್ಲವೇ ನಾ ಅವಳ ಮುಂದೇ ಪ್ರದರ್ಶಿಸಿದು ಹರಿದು ಹಾಕಿ ಬಿಡಬೇಕು ಆ ಬಟ್ಟೆಗಳು ಸಿಕ್ಕರೆ..

ಆಪ್ಪನಿಗೆ ದಿನಾ ನನ್ನ ಖರ್ಚುವೆಚ್ಚವೆಂಬುದು ತಲೆ ನೋವಾಗಿದರೂ ಸಹಾ ಎಂದಿಗು ನನ್ನ ಮುಂದೆ ತೋರ್ಪಡಿಸದೆ ಜೇಬಿನಲ್ಲಿರುವುದು ನಿನಗೆ ಎಂದು ತಮ್ಮ ಅಂಗಿಯ ಕಡೆಗೆ ಬೊಟ್ಟು ಮಾಡಿ ತೋರಿಸಿಬಿಡುತ್ತಿದರು ಅಮ್ಮ ಏನಾದರು "ಹೀಗೆ ಅವನಿಗೆ ಹಾಳು ಮಾಡಿ" ಎಂದರೆ 

"ನಿನಗೆ ಗೊತ್ತಾಗುವುದಿಲ್ಲ ನೀನು ಕಾಲೇಜಿಗೆ ಹೋಗಿದರೆ ತಿಳಿಯುತ್ತಿತ್ತು ಪಾಪ!! ನಮ್ಮ ಹುಡುಗ ಎಷ್ಟು ಕಡಿಮೆ ಖರ್ಚು ಮಾಡುತ್ತಾನೆ ಎಂದು" ಸುಮ್ಮನಾಗಿಸಿಬಿಡುತ್ತಿದರು

ಆ ದುಡ್ಡಿನಲ್ಲೆ ಅಲ್ಲವೇ ಅವಳಿಗೆ ಐಸ್-ಕ್ರಿಮು, ಬ್ಯಾಂಗಲ್ಸು, ಸಿನಿಮಾ ಎಂದು ಕೊಡಿಸುತಾ ಓಡಾಡಿದು... 

ಕಡೆಗೆ ಎಕ್ಸಾಮ್ಸ್ ಬರೆದ ಮೇಲೆ ಸಾಕು ಇಷ್ಟು ದಿನಾ ಒಟ್ಟಿಗೆ ಓಡಾಡಿದು ಇನ್ನು ಮುಂದೆ ನೀನು ನನ್ನ ಹಿಂದೆ ಬರಬೇಡ ಎಂದಾಗ ಆದ ದುಃಖಾ ಹೇಳತೀರದು "ನಾನು ಯಾವುದೇ ರೀತಿಯಲ್ಲೂ ತೊಂದರೆ ಕೊಡದೇ ನಿನ್ನ ಓದು ಮುಗಿಯುವಾವರೆಗೂ ಕಾಯುತ್ತೇನೆ" ಎಂದರೂ ಸಹಾ ನನ್ನ ಮಾತಿಗೆ ಬೆಲೆ ಕೊಡದೇ ಹೊರಟು ಹೋದಳು..

ಕೆಲಸ ಹುಡುಕಲು ಮನಸಿಲ್ಲದೇ ಅಲೆಯುತ್ತಾ ದಿನ ಕಳೆಯುತ್ತಿದ ನನಗೆ ಒಮ್ಮೆಲೆಗೆ ಆಘತಾ ಕಾದಿತ್ತು ಅದು ಅಪ್ಪನಿಗೆ ಎರಡು ಕಿಡ್ನಿ ಫೈಲ್ ಆಗಿದೆ ಎಂದು ತಿಳಿದಾಗಲೇ 

ಅಷ್ಟೀದರೂ ಸಹಾ ಕೆಲಸಕ್ಕೆ ಹೋಗದೆ ಓಡಾಡುತ್ತ ದಿನ ಕಳೆಯುತ್ತಿದೆ

ಆದರೆ

ಅಪ್ಪ ಎಷ್ಟೇ ಕಷ್ಟ ಇದಾಗಲು ನನ್ನನು ದೂರಾ ತಳ್ಳದೆ, ನನ್ನಿಂದ ಇನ್ನು ಸಾಧ್ಯವಿಲ್ಲ ಎಂದಿಲ್ಲಾ, ಅವರಿಗೆ ಕಿಡ್ನಿ ಫೈಲುರ್ ಆಗಿದೆ ಎಂಬುದಕ್ಕು ಹೆದರದೇ ನನ್ನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ ಅವರಿಗೆ ಮೋಸಾ ಮಾಡಬೇಕಾ?? 

ಅಯ್ಯೋ ತಲೆ ಸುತ್ತುತ್ತಿದೇ!!!

ಹೊಟ್ಟೆಯಲ್ಲಿ ಸಂಕಟಾ ತಾಳಲಾರೆ.............

ಕಣ್ಣಿಗೆ ಕತ್ತಲು ಬಡಿಯುತ್ತಿದೆ...

ಇಲ್ಲಾ!!!!!!!! ನಾನು ಬದುಕ ಬೇಕು ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು..
...
.......


ಇಂತಿ ನಿಮ್ಮವ

ವಿ

3 comments:

  1. ಕಥಾನಾಯಕ ಬದುಕಬೇಕು...ಎರಡು ಮೂರು ವರುಷ ಐಸ್ ಕ್ರೀಂ, ಸಿನಿಮಾ, ಪಾರ್ಕು ಅಲೆಯುವ ಹೃದಯಗಳು ಬಹಳ ಸಿಗುತ್ತವೆ..ಮಿಡಿಯುವ ಮಾತಾ ಪಿತೃಗಳ ಹೃದಯ ಗೂಗಲ್ ನಲ್ಲೂ ಸಿಗೋಲ್ಲ..ತಳಮಳ ಸುಂದರವಾಗಿ ವಿವರಿಸಿದ್ದೀರ..ತಿರಸ್ಕಾರಗೊಂದಾಗ ಹೃದಯ ಕುಸಿಯುತ್ತದೆ..ನಿಜ ಆದ್ರೆ ಜ್ವಾಲಾಮುಖಿಯಂತೆ ಕುಡಿಯುತ್ತಿದ್ದರು ಪ್ರೀತಿ ಪ್ರೇಮ ತೋರಿಸುವ ಮಾತಾ ಪಿತೃಗಳು ಎಲ್ಲಕ್ಕಿಂತಲೂ ಮೇಲು..ಗೂಗಲ್ ನಲ್ಲಿ ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಗೆಳತಿ, ಪ್ರೇಯಸಿ, ಕರೆ!@#!@#!@#!@ ಎಲ್ಲವು ಸಿಗುತ್ತವೆ..ಮಾತಾ ಪಿತ್ರುಗಳಲ್ಲ..ನಿಮ್ಮ ನಾಯಕನನ್ನು ಬದುಕಿಸಿ..ತಂದೆ ತಾಯಿಯನ್ನು ಆದಷ್ಟು ದಿನ ಉಳಿಸಿಕೊಳ್ಳಲು ಹೇಳಿ...(ಅನಿಸಿಕೆ ತುಂಬಾ ಉದ್ದವಾಗಿದೆ ಕ್ಷಮೆ ಇರಲಿ)

    ReplyDelete
  2. ಕಮೆಂಟ್-ಗಾಗಿ ಧನ್ಯವಾದಗಳು ಶ್ರೀಕಾಂತ್.. ಕಥಾ-ನಾಯಕ ಬದುಕಬೇಕಾ ಸಾಯಬೇಕಾ ಎಂಬುದನ್ನು ನಮ್ಮ ಬ್ಲಾಗಿಗರೇ ನಿರ್ಧರಿಸಲೆಂದು ಕಡೆಯ ಭಾಗ ಹಾಗೆ ಉಳಿಸಿದೆ ಮತ್ತೊಮ್ಮೆ ನಿಮ್ಮ ಕಮೆಂಟ್-ಗಾಗಿ ಧನ್ಯವಾದಗಳು...

    ReplyDelete
  3. ಬದುಕು ತುಂಬಾ ದೊಡ್ಡದು, ಪ್ರೀತಿ ಎಷ್ಟೇ ಸತ್ಯವಾಗಿದ್ದು ಬೇರೆಯಾದರು ಅದು ಜೀವನದ ಭಾಗವೇ ಹೊರತು ಇಡೀ ಜೀವನ ಅಲ್ಲ, ಹುಡುಗಿಯ ಪ್ರೀತಿ ಅಲ್ಲದೆ ನಂಬಿದ ತಂದೆ, ತಾಯಿ, ಸ್ನೇಹಿತರಿಗಾಗಿ ಆದರು ಆ ಪ್ರೀತಿಗಾಗಿಯಾದರು ಬದುಕಬೇಕಬೇಡವೇ?
    ಹೌದು ಪ್ರೀತಿ ಸರಿ ತಪ್ಪುಗಳ ಲೆಕ್ಕಾಚಾರವಲ್ಲ,
    ಅವಳು ಬಿಟ್ಟು ಹೋದಳು ಅಂದ ಮಾತ್ರಕ್ಕೆ ಮರೆಯೋಕೆ, ಮರೆತು ಅವಳನ್ನ ದ್ವೇಶಿಸೋಕೆ ಅದು ಕೊಟ್ಟು ತಗೋಳೋ ವ್ಯವಹಾರವಲ್ಲ..
    ಭಗ್ನ ಪ್ರೇಮಿಗೆ ಅರ್ಥವಾಗುವ ತರ್ಕ ಅಲ್ಲ, ಅವನ ಮನಸ್ಸಿನ ಸ್ಥಿತಿ ಹಾಗಿರುತ್ತೆ.
    ಆದರೂ, ದಾರಿಯಲ್ಲಿ ಎಡವಿದ ಮಾತ್ರಕ್ಕೆ ನಡೆವುದ ನಿಲ್ಲಿಸುವುದೇ?!
    ಬದುಕ ಕಷ್ಟ, ಆದರೆ ಅಂತದ್ದೇ ಎಷ್ಟೋ ಕಷ್ಟಗಳ ಹೊತ್ತು ಸಾಕಿದ ನಂಬಿದ ನಮ್ಮವರಿಗಾದರು ಬದುಕ ಬೇಕು.. ಇದು ಕೂಡ ಅದೇ ಪ್ರೀತಿಯ ಮನವಿ. ಬದುಕು ಇರುವುದು ಬದುಕಲಿಕ್ಕೆ, ಸಾಯಕಲ್ಲ...

    ReplyDelete