Friday, February 11, 2011

ನಮ್ಮ್ ಕಡೆ ಹಿಂಗೆ..

* ಕೋಳಿ ಕುಗೊವಾಗ ಕತ್ತು ಕುಯೊರು
* ಕೆರೆ ಪಕ್ಕ ಒಂದು ಬಾವಿ ಇಡ್ತಾರೆ
* ಕತ್ತ್ಲಲ್ಲಿ ಕುಂತ್ಕೊಂಡು ಬೀಡಿ ಸೇದ್ತಾರೆ
* ಚಳಿ ಕಾಯಿಸ್ಕೋಳೊಕ್ಕೆ ಯಾರ್ ಮನೆ ಸುಟ್ರೆ ನಮ್ಗೆನು ಅಂತರೆ?
* ಬಾರ್ ಒಳಗಿದ್ದ ಗಂಡನ್ನ ಹಿಗ್ಗ ಮುಗ್ಗ ಹೊಡಿಯೊ ಹೆಂಗಸ್ರು
* ಹೊಡ್ಸ್ಕೊಂಡು ಮನೆಗೆ ಹೋದ್ಮ್ಯಾಲು ಮೈ ಕೈ ನೋವು ಅಂತ ಬಾರ್ ಕಡಿಕ್ಕೆ ಹೆಜ್ಜೆ ಹಾಕೊ ಗಂಡಸ್ರು
* ಖಾರ ಖಾರ ಅನ್ನೊ ಮೆಣಸಿನಕಾಯಿನ ರೊಟ್ಟಿ ಜೊತೆ ಸಲಿಸಾಗಿ ತಿನೊವ್ರು
* ಕೀಲಿ ಕೈ ಕಳೆದು ಹೋಯ್ತು ಅಂತ ಬಾಗಿಲು ಹೊಡಿಯೊರು
* ಕಾರು ಊರೊಳಿಕ್ಕೆ ಬಂತಂದ್ರೆ ಅದ್ರ ಹಿಂದೆ ಹತ್ತಾರು ಐಕ್ಳು
* ಮಾರಮ್ಮನ ಜಾತ್ರೆಗೆ ಮೈ ಮ್ಯಾಗೆ ಬರೊ ದೇವಿ
* ಬೇವಿನ್ ಸೊಪ್ಪು ಹಿಡ್ಕೊಂಡು ಆಕೆ ಸುತ್ತ ಕುಣ್ಣಿಯೊ ಭಕ್ತೆಯರು..
* ಒಬ್ರ ಮನೆಗೆ ರ್ ಟಿ.ವಿ ತಂದರೆ ಊರಿಗೆ ಹಬ್ಬ..
* ಯಾರಾದ್ರು ಸತ್ರೆ ತಮಟೆ ತರಿಸಿ ಎಳೆಯರಿಂದ ಗೆಳೆಯರವರೆಗು ಕುಣಿದು ಕುಪ್ಪಳಿಸುತಾರೆ
* ಮನೆ ದೀಪ ಆರಿಸಿ ಬೀದಿ ದೀಪದಲ್ಲಿ ಅಡುಗೆ ಮಾಡ್ತಾರೆ..
* ಪಕ್ಕದ ಮನೆಯವರ ಮನೆಲ್ಲಿ ಕುಳಿತು ಸಿರಿಯಲ್ ನೋಡ್ತಾರೆ.


ನಿಮ್ಮವ...
ವಿ ..

No comments:

Post a Comment