Monday, January 17, 2011

ಇದ್ದಕಿದಂತೆ ಬೆಲೆ ಏರಿಸೋ ಮಾರ್ಕೆಟ್ ಮಂದಿ...

                     ಹೀಗೆ ಮೊನ್ನೆ ನಮ್ಮ ನೆಂಟರೊಬ್ಬರು ದೈವದೀನರಾದರು ಸರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಮುಖ ಕಡೆಯ ಬಾರಿ ಎಂಬಂತೆ ನೋಡಲು ಹೊರಟೆ... ದಾರಿಯಲ್ಲಿ ಹೋಗಬೇಕದರೆ ಅನಿಸಿತು ಬರಿಗೈಲ್ಲಿ ಹೇಗೆ ಹೋಗೊದು ಒಂದು ಹೂವಿನ ಹಾರ ತೆಗೆದುಕೊಳೊಣ ಅಂತಾ ಕೆ.ಆರ್.ಮಾರ್ಕೆಟ್ ಇಳಿದು ಹಾರ ತರಲು ಹೊರಟೆ..

                      ಅದುವರೆಗು ನಾನು ಯಾವತ್ತು ಹೂ ತರಲು ಹೋದವನೆ ಅಲ್ಲ ಅದರಲ್ಲೂ "ಕೆ.ಆರ್.ಮಾರ್ಕೆಟ್" ಎಂಬ "ಜನ ಜಾತ್ರೆಗೆ"...
ಕೆ.ಆರ್.ಮಾರ್ಕೆಟ್ ಎಂದರೆ ನನಗೆ ಕಾಲಿಟ್ಟರೆ ಜಾರಿ ಬೀಳುವಂತಾ ಗಲಿಜು ಕೊಳಚೆ ಜಾಗ ಎಂಬುದೆ ನೆನಪಗುತ್ತೆ.. ಒಳಗೆ ಹೋಗಿ ಕೆಳಗೆ ಇಳಿದು ನಡೆದುಕೊಂಡು ಹಾಗೆ ನೋಡುತಾ ಇದ್ದವನಿಗೆ ಇದ್ದಕಿದಂತೆ ಜ್ಞಾನೊದಯ ಆಯ್ತು ನಾನು ಹೀಗೆ ನೋಡುತಾ ನಿಂತಿದ್ರೆ ನನಗೆ ಟೋಪಿಯೊಂದನು ಆರಾಮಾಗಿ ತೊಡಿಸಿಬಿಡುತಾರೆ ಅಂತ.. ಏನೋ ಎಲ್ಲಾ ತಿಳಿದವನಂತೆ ನಟಿಸುತಾ ಬೇಗ ಬೇಗನೆ ಹೆಜ್ಜೆ ಹಾಕುತ್ತ ಹೊರಟೆ..
 

                      ಸರಿ ಒಂದು ಕಡೆ ನಿಂತು ಹಾರ ಎಷ್ಟು ಗುರು? ಅಂದೆ ಅದಕ್ಕೆ ಅಲ್ಲಿದ ಹುಡುಗ ನನ್ನನು ನೋಡಿ(ನಾನು ಅವತ್ತು ಬಿಳಿಯ ಟಿ-ಶರ್ಟ್ ತೊಟ್ಟಿದೆ ನನ್ಗೆ ಅದು ಸ್ವಲ್ಪ ಚೆನ್ನಾಗಿ ಕಾಣ್ಣುತೆ ನಂಬ್ರಿ) 180 ರೂಪಾಯಿ ಅಂದ ನಾನು ಏನು ನಾ ಹೆಂಗ್ ಕಾಣಂತಾ ಇದ್ದಿನಿ ಬಕ್ರ ತರ ಇದ್ದಿನಾ?? ಸುಮ್ಮನೆ ಕೊಡೊ ರೇಟು ಮಾತಾಡು ಅಂದೆ ನೋಡಿ ಸಾರ್ ನಿಮ್ಮಗೆ ಒಂದು10ರೂಪಯಿ ಕಡಿಮ್ಮೆ ಕೊಡ್ತಿನಿ ಬೇಕಿದ್ರೆ ತೊಗೊಳಿ ಇಲ್ಲ ಅಂದ್ರೆ ಹೋಗಿ ಅಂದ.. ನಾನು ಎಲಾ ನನ್ ಮಗನೇ ನಿನ್ಗೆ ಇಷ್ಟೊಂದು ಬಿಲ್ಡ-ಅಪ್ ಬೇಕಾ ಅಂತಾ ಮುಂದೆ ಹೋದೆ.

                      ಹೋಗ್ತಾ ಇನೊಂದು 2 ಕಡೆ ವಿಚಾರಿಸಿದೆ 200ರೂಪಾಯಿ ಅಂತಾ ಅಂದ್ರು ಕಡಿಮೆ ಮಾಡಿಕೊಡ್ರಿ 2 ಹಾರ ತೊಗೊಬೇಕು ಅಂದ್ರೆ 350ರೂಪಾಯಿ ಕೊಡಿ ತೊಗೊಂಡ್ ಹೋಗಿ ಅಂತಾರೆ ಇದ್ಯಾಕೊ ಆಗೋ ಕೆಲಸ ಅಲ್ಲ ಅಂತ ಆ ಮುಂಚಿನ ಅಂಗಡಿ ಹುಡುಕುತಾ ಹೋದೆ.. (ಅಲ್ಲಿ ಅಂಗಡಿಗಳೆ ದೊಡ್ಡ Confusionu) ಕಡೆಗೂ ಸಿಕ್ತು ಆ ಅಂಗಡಿ, ಹುಡುಗ ನನ್ನ ನೋಡಿದ ಸರಿ ಕೊಡಪ್ಪ 2 ಹಾರ ಅಂದ್ರೆ ಆಸಾಮಿ 190 ಗುರು ರೇಟು ಅಂತಾ ಅನೋದಾ?? ಹಿಂಗೆ ಹೋಗಿ ಹಂಗೆ ಬರೋ ಅಷ್ಟ್ರಲ್ಲಿ ಏಕಪ್ಪಾ ರೇಟು ಏರಿಸಿ ಬಿಟಿದಿಯಾ ಅಂದ್ರೆ.. ಅವ್ನು ರೋಜಾ ಹೂವಾ ರೇಟು ಜಾಸ್ತಿ ಆಯ್ತು ಗುರು ಅದಕ್ಕೆ ಅಂತಂದಾ... ನೀನು ಅವಾಗ್ಲೆ ಇರೊ ಹೂವಾನೆ ತಾನೆ ಮಾರುತ ಇರೋದು ಹಾಗಿದ ಮೇಲೆ ಹಳೆ ರೇಟಿಗೆ ಹೂವಾ ಕೊಡು ಅಂದೆ ಅವ್ನು ಜಗಳಕ್ಕೆ ಬಿದ್ದ ಹಾಗೆ ನೋಡ್ ಗುರು ಬೇಕಾ ತೊಗೋ ಇಲ್ವಾ ಜಾಗ ಖಾಲಿ ಮಾಡು ಸುಮ್ನೆ ಯಾಕ್ ತಲೆ ತಿಂತಿಯ ಅಂತಾ ಬೈದೆಬಿಟ್ಟಾ..

                     ಸರಿ ಇವಾಗ ಇನೊಮ್ಮೆ ಹೋಗಿ ಅಂಗಡಿ ಸುತ್ತಿ ಬಂದ್ರೆ ಈ ಆಸಾಮಿ ಪಕ್ಕಾ 200 ರೂಪಾಯಿ ಅಂತಾನೆ ಅಂತಾ ಹೇಳಿ 2 ಹಾರ ತೊಗೊತಿನಿ 300 ರೂಪಾಯಿ ಹಾಕ್ಕೊ ಟೊಟಲ್ ರೇಟು ಅಂದೆ ಬರೊಲ್ಲಾ ಸಾರ್ ಅಂದ ಸದ್ಯ ಸ್ವಲ್ಪಾ ಮರ್ಯಾದೇ ಸಿಕ್ಕ್ತು ಅಂದ್ರೆ ನಮ್ಮ್ ರೂಟಿಗೆ ಬಂದಾ ಅಂತಾ ಹೇಳಿ ನೋಡ್ ಗುರು ಕೊಡೊ ಹಂಗಿದ್ರೆ ಕೊಡು ಇಲ್ವಾ ಬ್ಯಾಡ ಬಿಡು ಅಂತಾ ಹೊರಟೆ ಅವ್ನು ಬನ್ನಿ ಸಾರ್ ಕೊಡೋಣಾ ಅಂತಾ ಕವರ್ ಒಂದಕ್ಕೆ 2 ರೂಪಾಯಿ ಎಕ್ಸಟ್ರಾ ಕಿತ್ತ್ಕೊಂಡು ಹೂ ಕೊಟ್ಟಾ ನನ್ಗೆ ಕಾಡೊ ಪ್ರಶ್ನೆ ಅಂದ್ರೆ ಯಾಕೆ ಇದ್ಕಿದ ಹಾಗೆ ರೇಟು ಜಾಸ್ತಿ ಮಾಡಿದ್ರು ಅಂತಾ...???


ನಿಮ್ಮವ 
ವಿ

No comments:

Post a Comment