Wednesday, September 24, 2014
Tuesday, October 8, 2013
Monday, October 7, 2013
Friday, November 23, 2012
ನೆನಪು
ಮನಸ್ಸಿಲ್ಲದ ಮನಸಲ್ಲಿ
ಹೊರಟು ಹೋದಳು
ಕನಸಿಲ್ಲದ ಕಂಗಳು
ಬಾಡಿ ಹೋದವು
ನಿನ್ನೊಂದಿಗೆ ನಡೆದ
ಹೆಜ್ಜೆಗಳು ಇಂದು
ಕೇವಲ ನೆನಪಾಗಿದೇ
ನೆನೆದಿದ್ದಾ ಆ ಮಳೆಯ
ಕೊರೆವ ಚಳಿಗೆ ತಬ್ಬಿ ಕುಳಿತದ್ದು
ಶೀತಾ ಕಡಿಮೆಯಾಗದೆ
ಮೆಣಸಿನ ಅನ್ನ ತಿಂದದ್ದು
ಕೇವಲ ನೆನಪೇ ??
ಯಾರು ಬೇಗನೆ ರೆಪ್ಪೆ
ಮುಚ್ಚುವರೆಂದು ಒಬ್ಬರನ್ನೊಬ್ಬರು
ನೋಡುತಾ ಆಟವ ಮರೆತು
ಕುಳಿತಿದ್ದು ನೆನಪೇ ??
ಹುಡುಗಿ??
ನಿನ್ನ ದಾರಿಯಾ ಕಾಯುತ್ತಾ
ಕುಳಿತಿದವನಿಗೆ ನೆಪಾ ಹೇಳಿ
ನಗಿಸುತಿದದ್ದು ನೆನಪೇ ??
ಇಂದು ಅದೆಲ್ಲಾ ನೆನಪೇ....
ಗಟ್ಟಿಮೇಳವೆಂದು ಹೇಳುವಾವರೆಗು
ನೀ ನನ್ನೊಂದಿಗೆ ಬರುವೇ
ಎಂಬುದು ಮಾತ್ರವೇ ಬ್ರಹ್ಮೆಯೇ..
ನೀ ನನ್ನ ನೋಡಲಾಗದೇ
ತಲೆ ತಗಿಸಿದ್ದು ಇಂದು
ನೆನಪೇ... ಚೆಂದದ ಹುಡುಗಿ
ನೀ ನೆನಪಾಗಿಯೇ ಉಳಿದೇ...
ನನ್ ಈ ಬಾಳಲಿ ನೀ
ಶಾಶ್ವತವಾದ ನೆನಪೇ...
ಇಂತಿ ನಿಮ್ಮವ
Nವಿ....
Thursday, October 4, 2012
ಹೇಡಿ ಬದುಕು ನನ್ನದು
ಅಬ್ಬಬ್ಬಾ ಇದು ಕಡೆಯ ಮಾತ್ರೆ ಇದನ್ನು ನುಂಗಿದರೆ ಬೆಳಗ್ಗೆ ನಾನು ಇರುವುದಿಲ್ಲ!! ಎಂದು ಕಡೆಯ ಮಾತ್ರೆಯನ್ನು ಬಾಯಲಿಟ್ಟು ನೀರು ಸುರಿದುಕೊಂಡೆ. ಮನೆಗೆ ಬಂದು ತಣ್ಣಗೆ ಫ್ಯಾನ್ ಗಾಳಿಗೆ ಹಾಗೆ ಮಂಚಕ್ಕೊರಗಿದ ನನಗೆ ಹಾಗೆ ಹಳೆಯ ನೆನಪುಗಳಾವರಿಸತೊಡಗಿತು
.
.
.
.
.
ನನ್ನ ಶಾಲಾ ದಿನಗಳಲ್ಲಿ ನನ್ನ ಅಪ್ಪ, ಅವರ ಟಿವಿಸ್ ಹೆವಿ ಡ್ಯುಟಿ ಮೇಲೆ ನನ್ನನ್ನು ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿದ್ದದ್ದು,
ಸುಮ್ಮನೇ ಹೊಟ್ಟೆ ನೋವು ಎಂದರು ಸಹಾ ಶಾಲೆಗೆ ಕಳುಹಿಸದೆ ಮನೆಯಲ್ಲೇ ಉಳಿಸಿಕೊಳ್ಳುತಿದ್ದದು ನನಗೆ ಬೇಕು ಎಂದದ್ದನನ್ನು ಎಂದೂ ಇಲ್ಲವೆನದೆ ತಂದುಕೊಡುತ್ತಿದ್ದದ್ದೆಲ್ಲ ನೆನಪಾಯ್ತು
ಕಣ್ಣ ತುದಿ ಒದ್ದೆಯಾಗತೊಡಗಿತು......
ಮತ್ತೆ ನನ್ನ ಹುಡುಗಿ ನೆನಪದಳು ಛೇ!! ಅವಳು ಇಲ್ಲಾ ನೀ ನನಗೆ ಬೇಡ ಎಂದು ಛೀಕರಿಸಿದ ಮೇಲು ಈ ಬಾಳು ನನಗೇಕೇ?? ನನ್ನ ನಿರ್ಧಾರ ಸರಿಯಾಗಿದೆ ಎಂದೆನಿಸಿತು.
ತಲೆಯನ್ನು ದಿಂಬಿಗೊರಗಿಸಿದೆ ಫ್ಯಾನ್ ಓಡುತಾ ಇರುವಂತೆ ನನ್ನ ಆಲೋಚನೆಗಳು ಓಡತೊಡಗಿತು..
ಕಾಲೇಜ್ ದಿನಗಳಲ್ಲಿ ನಾನು ಹಠಾ ಮಾಡಿದೆ ಎಂದು ಮನೆಯಲ್ಲಿ ಎಷ್ಟೇ ಕಷ್ಟವಿದರೂ ಸಹಾ ನನಗೆ ಅಂತ ಅಪ್ಪ ಪ್ರೀತಿಯಿಂದ ಸ್ಯಾಮ್ಸಂಗ್ R210 ಮೊಬೈಲ್ ಕೊಡಿಸಿದ್ದರು, ನನ್ನ ಶೋಕಿಗೆ ಎಂದು ಇಲ್ಲವೆನದೆ ಕೇಳಿದ ಬಟ್ಟೆ ಬರೆಯನ್ನು ಕೊಡಿಸುತ್ತಿದರು,
ಆ!!!! ಆ ಬಟ್ಟೆ ಬರೆಗಳನೇ ಅಲ್ಲವೇ ನಾ ಅವಳ ಮುಂದೇ ಪ್ರದರ್ಶಿಸಿದು ಹರಿದು ಹಾಕಿ ಬಿಡಬೇಕು ಆ ಬಟ್ಟೆಗಳು ಸಿಕ್ಕರೆ..
ಆಪ್ಪನಿಗೆ ದಿನಾ ನನ್ನ ಖರ್ಚುವೆಚ್ಚವೆಂಬುದು ತಲೆ ನೋವಾಗಿದರೂ ಸಹಾ ಎಂದಿಗು ನನ್ನ ಮುಂದೆ ತೋರ್ಪಡಿಸದೆ ಜೇಬಿನಲ್ಲಿರುವುದು ನಿನಗೆ ಎಂದು ತಮ್ಮ ಅಂಗಿಯ ಕಡೆಗೆ ಬೊಟ್ಟು ಮಾಡಿ ತೋರಿಸಿಬಿಡುತ್ತಿದರು ಅಮ್ಮ ಏನಾದರು "ಹೀಗೆ ಅವನಿಗೆ ಹಾಳು ಮಾಡಿ" ಎಂದರೆ
"ನಿನಗೆ ಗೊತ್ತಾಗುವುದಿಲ್ಲ ನೀನು ಕಾಲೇಜಿಗೆ ಹೋಗಿದರೆ ತಿಳಿಯುತ್ತಿತ್ತು ಪಾಪ!! ನಮ್ಮ ಹುಡುಗ ಎಷ್ಟು ಕಡಿಮೆ ಖರ್ಚು ಮಾಡುತ್ತಾನೆ ಎಂದು" ಸುಮ್ಮನಾಗಿಸಿಬಿಡುತ್ತಿದರು
ಆ ದುಡ್ಡಿನಲ್ಲೆ ಅಲ್ಲವೇ ಅವಳಿಗೆ ಐಸ್-ಕ್ರಿಮು, ಬ್ಯಾಂಗಲ್ಸು, ಸಿನಿಮಾ ಎಂದು ಕೊಡಿಸುತಾ ಓಡಾಡಿದು...
ಕಡೆಗೆ ಎಕ್ಸಾಮ್ಸ್ ಬರೆದ ಮೇಲೆ ಸಾಕು ಇಷ್ಟು ದಿನಾ ಒಟ್ಟಿಗೆ ಓಡಾಡಿದು ಇನ್ನು ಮುಂದೆ ನೀನು ನನ್ನ ಹಿಂದೆ ಬರಬೇಡ ಎಂದಾಗ ಆದ ದುಃಖಾ ಹೇಳತೀರದು "ನಾನು ಯಾವುದೇ ರೀತಿಯಲ್ಲೂ ತೊಂದರೆ ಕೊಡದೇ ನಿನ್ನ ಓದು ಮುಗಿಯುವಾವರೆಗೂ ಕಾಯುತ್ತೇನೆ" ಎಂದರೂ ಸಹಾ ನನ್ನ ಮಾತಿಗೆ ಬೆಲೆ ಕೊಡದೇ ಹೊರಟು ಹೋದಳು..
ಕೆಲಸ ಹುಡುಕಲು ಮನಸಿಲ್ಲದೇ ಅಲೆಯುತ್ತಾ ದಿನ ಕಳೆಯುತ್ತಿದ ನನಗೆ ಒಮ್ಮೆಲೆಗೆ ಆಘತಾ ಕಾದಿತ್ತು ಅದು ಅಪ್ಪನಿಗೆ ಎರಡು ಕಿಡ್ನಿ ಫೈಲ್ ಆಗಿದೆ ಎಂದು ತಿಳಿದಾಗಲೇ
ಅಷ್ಟೀದರೂ ಸಹಾ ಕೆಲಸಕ್ಕೆ ಹೋಗದೆ ಓಡಾಡುತ್ತ ದಿನ ಕಳೆಯುತ್ತಿದೆ
ಆದರೆ
ಅಪ್ಪ ಎಷ್ಟೇ ಕಷ್ಟ ಇದಾಗಲು ನನ್ನನು ದೂರಾ ತಳ್ಳದೆ, ನನ್ನಿಂದ ಇನ್ನು ಸಾಧ್ಯವಿಲ್ಲ ಎಂದಿಲ್ಲಾ, ಅವರಿಗೆ ಕಿಡ್ನಿ ಫೈಲುರ್ ಆಗಿದೆ ಎಂಬುದಕ್ಕು ಹೆದರದೇ ನನ್ನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ ಅವರಿಗೆ ಮೋಸಾ ಮಾಡಬೇಕಾ??
ಅಯ್ಯೋ ತಲೆ ಸುತ್ತುತ್ತಿದೇ!!!
ಹೊಟ್ಟೆಯಲ್ಲಿ ಸಂಕಟಾ ತಾಳಲಾರೆ.............
ಕಣ್ಣಿಗೆ ಕತ್ತಲು ಬಡಿಯುತ್ತಿದೆ...
ಇಲ್ಲಾ!!!!!!!! ನಾನು ಬದುಕ ಬೇಕು ನನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು..
...
.......
ಇಂತಿ ನಿಮ್ಮವ
ನವಿ
Wednesday, February 29, 2012
ಅಪ್ಪ ಕೆಟ್ಟವನಾ ??
ಅಪ್ಪನ ಕೋಪ, ಧರ್ಪ.. ಹೊಡೆಸಿಕೊಂಡ ಮೇಲೆ ಅಮ್ಮನ ಮುಸಿ ಮುಸಿ ಅಳು ನನ್ನನ್ನು ದಿಗ್ಬ್ರಮೆಗೊಳಿಸಿಬಿಟ್ಟಿತು. ನಾನು ಬೆಳೆದ ವಾತವರ್ಣ ನನ್ನನು ಮುಗ್ದಳನಾಗಿಸಿಬಿಟ್ಟಿತು, ಭಯ ನನ್ನನು ಅವರಸಿಕೊಂಡಿತ್ತು, ನನ್ನ ಕನಸುಗಳು ಕನಸಾಗಿಯೇ ಉಳಿದು ಹೋಗುತಿತ್ತು. ನಾನು ಏನಾದರೂ ಕೇಳಿದರೆ? ಅಮ್ಮನಿಗೆ ಹೊಡೆಯುವಂತೆ ಅಪ್ಪ ನಂಗು ಹೊಡಿಯುವನೆಂಬ ಭಯ!! ಮನದ ಮೂಲೆಯಲ್ಲಾವರಸಿ ಬಿಟ್ಟಿತು..
ಅಪ್ಪ ಎಂದರೆ ನನ್ನ ಪಾಲಿಗೆ ಅವನೊಬ್ಬ ಕುಡುಕಾ, ಹೊಡೆಯೆಲೆಂದೆ ಮನೆಗೆ ಬರುವ ರಕ್ಕಸ, ಅಮ್ಮನನು ಗೋಳು ಹೊಯ್ದುಕೊಳ್ಳುವಾತ ಎಂಬುದಷ್ಟೇ ಗೊತಿತ್ತು, ಆದರೆ ?? ನನ್ನ ಮೆಲೆ ಒಮ್ಮೆಯು ಕೈ ಮಾಡಿರಲಿಲ್ಲ ನನಗೆಂದು ಆಗಾಗ ಕೇಕು, ಬೊಂಡ, ಚೋವ್ ಚೋವು ತಂದುಕೊಡುತ್ತಿದ್ದ. ಜೇಬಿಗೆ ಕೈ ಹಾಕಿ ಕೈಗೆ ಸಿಕ್ಕಷ್ಟು ಚಿಲ್ಲರೆ ಕಾಸು ಕೈಗಿಡುತಿದ್ದ. ಇಷ್ಟು ಒಳ್ಳೆಯಾ ಅಪ್ಪ ಅಮ್ಮನನ್ನು ಕಂಡರೆ ಮಾತ್ರ ಹಾಗೆ ರೇಗಾಡುತಾನಲ್ಲ ?? ಎಂದುಕೊಳುತಿದ್ದೆ.
ಒಂದು ಬೆಳಗೆ ನನ್ನ ಅಮ್ಮ ಸೀರೆಯಲ್ಲಿ ನೇತಾಡುತಿದ್ದದನು ಕಂಡೆ, ಅದನ್ನು ಸಾವು ಎಂದರು ಸುತ್ತಾ ಜನ ಅಳುತ ಕುತ್ತಿದರು, ಅಪ್ಪ ಬಂಡಿ ಒಂದನ್ನು ತಂದು, ನನ್ನನು "ಮನೆಯಲ್ಲೇ ಇರು" ಎಂದು ಹೇಳಿ ಅಮ್ಮನನ್ನು ಅದರಲ್ಲಿ ಮಲಗಿಸಿ ಕರೆದೊಯ್ಡಾ. ಮನೆಯ ತುಂಬಾ ಜನ ಗೊಳೋ ಎಂದು ಅಳುತ ಇದ್ದಾರೆ ಅಪ್ಪಾನೇ ಅಮ್ಮನನ್ನು ಸಾಯಿಸಿದ್ದು ಎಂದು ಹೇಳುತ್ತಿದ್ದಾರೆ !!!
ವರ್ಷಕ್ಕೊಮ್ಮೆ ಶಾಲೆಯಲ್ಲಿ ನಮ್ ಮ್ಯಾಡಮ್ಮು ದುಡ್ಡು ಕೇಳಿದಾಗ ಅಪ್ಪ ಬಂದು ಕೊಟ್ಟು, ನನ್ಗೆ "ಚೆನ್ನಾಗಿ ಓದ್ಬೇಕು" ಎಂದು ಹೇಳಿ ಹೋಗ್ತಿದ್ದ. ಶಾಲೆ ಒಳ್ಗೆ ಒಂದು ದಿವ್ಸಾ ಹೊಟ್ಟಿ ಹಿಂಡ್ಕೊಂಡಂಗಾತು ಮೊಗ್ಗು ಅರಳಿ ಹೂವಾಗುವಂತೆ ನಾ ಹೆಣ್ಣಾಗಿದೇ, ನನ್ನ ಶಾಸ್ತ್ರವನ್ನು ಅಪ್ಪ ಸಂತಸದಿಂದ ಮಾಡಿಸ್ದಾ. ಅದದಾ ಮೇಲೆ ನಾ ಇರೊವರೆಗು ಅವ್ನು ಜಗ್ಗ್ಲಿ ಮೇಲೆಯೇ ಮಲ್ಗ್ತಿದಾ.
ನನ್ನ ಹತ್ತನೇ ತರಗತಿಯ ಫಲಿತಾಂಶ ಹೊರ ಬಂತು, ಅಪ್ಪ ಅದನ್ನು ಕೇಳಿ "ಓದಿದು ಸಾಕು ಮದುವೆಯಾಗು" ಎಂದ ನಾನು ಏನು ಮಾತಡಲಿಲ್ಲ, ಅಪ್ಪ ಹೊರಟು ಹೋದ. ಒಂದು ವಾರದ ನಂತರ "ನಿನಗೆ ನೋಡೊಕ್ಕೆ ಗಂಡು ಬರ್ತಾನೆ ಒಳ್ಳೆ ಮನೆತನದವ್ನು ನಿನ್ಗೆ ಒಳ್ಳೆಯ ಜೋಡಿ ಆಗಿರ್ತಾನೆ ತೊಗೊ ಈ ಸೀರೆ ಉಟ್ಕೊ" ಎಂದು ಹೊಸದೊಂದು ಸೀರೆ ಕೈಗಿತ್ತಾ.
ನನ್ನ ಮದುವೆ ನಿಶ್ಚಯ್ವಾಯ್ತು, ಅಪ್ಪ ಮದುವೆಯನ್ನು ತನ್ನ ಕೈಲಿ ಆದ ಮಟ್ಟಿಗೆ ಮಾಡಿದ, ಪದ್ದತಿಯಂತೆ ನಮ್ಮ ಮನೆಯಲ್ಲೇ 2 ದಿನ ಕಳೆದೆವು ನಂತರ ನಾನು ನನ್ನ ಗಂಡನ ಮನೆಗೆ ಹೊರಡುವ ಸಮಯ ಬಂತು.
ನಾನು ಹೊರಟು ಬರುತೆನೆಂದು ಅಪ್ಪನ ಕಾಲಿಗೆ ನಮ್ಸ್ಕರಿಸಿದೆ ಅಪ್ಪ ಆಶಿರ್ವದಿಸಿದ, ಅವ್ನ ಅಳಿಯನನ್ನು ಬಳಿಗೆ ಕರೆದು "ನನ್ನ ಮಗಳು ಏನೂ ಅರೆಯದ ಕೂಸು ಅವ್ಳು ತಪ್ಪು ಮಾಡಿದ್ದಲ್ಲಿ ಕ್ಷಮಿಸಿ ಬಿಡಿ, ಇಲ್ಲಿ ನಾನು ಇದುವರೆಗೂ ಆಕೆ ಮೇಲೆ ಕೈ ಮಾಡಿಲ್ಲ ದಯವಿಟ್ಟು ಆಕೆನ ಚೆನ್ನಾಗಿ ನೋಡಿಕೊಳ್ಳಿ ಎಂದ" ನನ್ನ ಕಣಂಚ್ಚಲ್ಲಿ ನೀರಿತ್ತು. ಬಂಡಿಯೊಳಗೆ ಕುಳಿತು ಅಪ್ಪನಿಗಾಗಿ ಹುಡುಕಿದೆ, ಮೂಲೆಯಲ್ಲಿ ಮಗುವಿನಂತೆ ಅಳುತಾ ನಿಂತಿದ್ದಾ...
ಅಪ್ಪ ಕೆಟ್ಟವನಾ??
ಇಂತಿ ನಿಮ್ಮವ...
ನವಿ
Wednesday, July 6, 2011
ಮೋಸನಾ ?? ಇಲ್ಲ ನಾ ಮಾಡ್ತಿರೊದು ಸರಿ!!!!!!!!!
ನಾ ನಿನ್ಗೆ ಮೋಸ ಮಾಡ್ತಿದಿನಾ? ಇಲ್ಲಾ ಕಣೋ ನನ್ಗೆ ನಿನ್ನ ಬಿಟ್ಟು ಬಾಳೋಕಾಗಲ್ಲ ನನ್ ಫ್ರೆಂಡ್ ಆಗಿ ಇರು ಪ್ಲೀಸ್
, ಅಯ್ಯೋ ದೇವ್ರೆ ನನ್ಗೆ ಯಾಕೆ ಇಂತ ಒಂದು ಕಷ್ಟ ಕೊಟ್ಟು ಬಿಟ್ಟೆ.. ಈ ಹುಡುಗನ್ನ ಬಿಟ್ಟು ನಾನು ನಗ್ತಾ ನಗ್ತಾ ಮದುವೆ ಮಾಡ್ಕೊಳ್ತಾ ಇದ್ದಿನಾ... 
ನಾ ಏನು ಮಾಡ್ಲಿ ಎಂತಾ ಮೋಸ ಮಾಡ್ತ ಇದ್ದಿನಿ ನನ್ನ ಹುಡುಗನಿಗೆ ನನ್ನ ಮನಸ್ಸಿಗೆ ನೆಮ್ಮದಿ ಕೊಡು.. ಪ್ಲೀಸ್ ನನ್ ಹುಡುಗನ ನನ್ ಮದುವೆಗೆ ಬರದಂತೆ ತಡಿ
ನಾನು ಅವನ ಬಾಡಿ ಹೋದ ಮುಖವನ್ನು ನೋಡೊಕ್ಕೆ ಆಗೊಲ್ಲ ತುಂಬಾ ನೋವು ಅನ್ಸುತೆ.. ಅವನು ಅಲ್ಲಿ ನೋವು ಪಡ್ತಾ ಇದ್ದಾಗ ನಾನು ಇಲ್ಲಿ ನಗ್ತಾ ಫೋಟೋಗೆ ಪೋಸ್ ಕೊಡ್ಬೇಕಾ?? ಎಂತಾ ಪರಿಸ್ತಿತಿಗೆ ತಂದು ಬಿಟ್ಟೆ ದೇವರೆ ನನನ್ನು...
, ಅಯ್ಯೋ ದೇವ್ರೆ ನನ್ಗೆ ಯಾಕೆ ಇಂತ ಒಂದು ಕಷ್ಟ ಕೊಟ್ಟು ಬಿಟ್ಟೆ.. ಈ ಹುಡುಗನ್ನ ಬಿಟ್ಟು ನಾನು ನಗ್ತಾ ನಗ್ತಾ ಮದುವೆ ಮಾಡ್ಕೊಳ್ತಾ ಇದ್ದಿನಾ... 
ನಾ ಏನು ಮಾಡ್ಲಿ ಎಂತಾ ಮೋಸ ಮಾಡ್ತ ಇದ್ದಿನಿ ನನ್ನ ಹುಡುಗನಿಗೆ ನನ್ನ ಮನಸ್ಸಿಗೆ ನೆಮ್ಮದಿ ಕೊಡು.. ಪ್ಲೀಸ್ ನನ್ ಹುಡುಗನ ನನ್ ಮದುವೆಗೆ ಬರದಂತೆ ತಡಿ
ನಾನು ಅವನ ಬಾಡಿ ಹೋದ ಮುಖವನ್ನು ನೋಡೊಕ್ಕೆ ಆಗೊಲ್ಲ ತುಂಬಾ ನೋವು ಅನ್ಸುತೆ.. ಅವನು ಅಲ್ಲಿ ನೋವು ಪಡ್ತಾ ಇದ್ದಾಗ ನಾನು ಇಲ್ಲಿ ನಗ್ತಾ ಫೋಟೋಗೆ ಪೋಸ್ ಕೊಡ್ಬೇಕಾ?? ಎಂತಾ ಪರಿಸ್ತಿತಿಗೆ ತಂದು ಬಿಟ್ಟೆ ದೇವರೆ ನನನ್ನು...ಇಂತಿ ನಿಮ್ಮವ ...
ನವಿTuesday, February 15, 2011
ಹೋಗುತಿರುವೆ ಅವಳೆಡೆಗೆ..
ಬೇಸತ್ತು ಹೋಗಿರುವೆ ನೆನಪುಗಳಿಂದ.
ಕಾಣಬೇಕಿದೆ ನಿನ್ನೊಮ್ಮೆ
ಮರೆಯಬೇಕಿದೆ ಜಗವನೊಮ್ಮೆ
ನಿನ್ನ ತೋಳಲ್ಲಿ ಬಂಧಿಸೊಮ್ಮೆ
ಕೇವಲ ಒಮ್ಮೆ...
ಮಾತನಾಡಿದೆ
ನಿನ್ನ ನೆನಪುಗಳೊಂದಿಗೆ
ಮತ್ತೆ ಕಾಡಿದೆ
ಹಳೆಯ ವಿಷಯಗಳೊಂದಿಗೆ
ನಿನ್ನ ಪ್ರೀತಿಯ ನೆನಪುಗಳೊಂದಿಗೆ
ನಡೆಯುವ ಹಾದಿಯೂ ಏಕೋ
ಬೇಸರ ತಂದಿದೆ
ನೋಡುವ ಕಂಗಳು ನೀನಿಲ್ಲದೇ
ಅಳುತ ಹಾಡಿವೆ
ಕಾಣಬೇಕಿದೆ ನಿನ್ನ ಒಮ್ಮೆಲೆ
ಕೇವಲ ಒಮ್ಮೆ
ಎನ್ನುವ ಆಸೆಯು ಕಾಡಿದೆ ದಿನವು,
ಬರುತಿರುವೆ ನಿನ್ನ
ದಾರಿಯಲ್ಲಿ ನಾ
ಕಾಯುವೆಯ ಕಿನ್ನರಿ??
ಕಾಣಬೇಕಿದೆ ನಿನ್ನೊಮ್ಮೆ
ಮರೆಯಬೇಕಿದೆ ಜಗವನೊಮ್ಮೆ
ನಿನ್ನ ತೋಳಲ್ಲಿ ಬಂಧಿಸೊಮ್ಮೆ
ಕೇವಲ ಒಮ್ಮೆ...
ಮಾತನಾಡಿದೆ
ನಿನ್ನ ನೆನಪುಗಳೊಂದಿಗೆ
ಮತ್ತೆ ಕಾಡಿದೆ
ಹಳೆಯ ವಿಷಯಗಳೊಂದಿಗೆ
ನಿನ್ನ ಪ್ರೀತಿಯ ನೆನಪುಗಳೊಂದಿಗೆ
ನಡೆಯುವ ಹಾದಿಯೂ ಏಕೋ
ಬೇಸರ ತಂದಿದೆ
ನೋಡುವ ಕಂಗಳು ನೀನಿಲ್ಲದೇ
ಅಳುತ ಹಾಡಿವೆ

ಕಾಣಬೇಕಿದೆ ನಿನ್ನ ಒಮ್ಮೆಲೆ
ಕೇವಲ ಒಮ್ಮೆ
ಎನ್ನುವ ಆಸೆಯು ಕಾಡಿದೆ ದಿನವು,
ಬರುತಿರುವೆ ನಿನ್ನ
ದಾರಿಯಲ್ಲಿ ನಾ
ಕಾಯುವೆಯ ಕಿನ್ನರಿ??
ಇಂತಿ ನಿಮ್ಮವ ...
ನವಿ Friday, February 11, 2011
ನಮ್ಮ್ ಕಡೆ ಹಿಂಗೆ..
* ಕೋಳಿ ಕುಗೊವಾಗ ಕತ್ತು ಕುಯೊರು
* ಕೆರೆ ಪಕ್ಕ ಒಂದು ಬಾವಿ ಇಡ್ತಾರೆ
* ಕತ್ತ್ಲಲ್ಲಿ ಕುಂತ್ಕೊಂಡು ಬೀಡಿ ಸೇದ್ತಾರೆ
* ಚಳಿ ಕಾಯಿಸ್ಕೋಳೊಕ್ಕೆ ಯಾರ್ ಮನೆ ಸುಟ್ರೆ ನಮ್ಗೆನು ಅಂತರೆ?
* ಬಾರ್ ಒಳಗಿದ್ದ ಗಂಡನ್ನ ಹಿಗ್ಗ ಮುಗ್ಗ ಹೊಡಿಯೊ ಹೆಂಗಸ್ರು
* ಹೊಡ್ಸ್ಕೊಂಡು ಮನೆಗೆ ಹೋದ್ಮ್ಯಾಲು ಮೈ ಕೈ ನೋವು ಅಂತ ಬಾರ್ ಕಡಿಕ್ಕೆ ಹೆಜ್ಜೆ ಹಾಕೊ ಗಂಡಸ್ರು
* ಖಾರ ಖಾರ ಅನ್ನೊ ಮೆಣಸಿನಕಾಯಿನ ರೊಟ್ಟಿ ಜೊತೆ ಸಲಿಸಾಗಿ ತಿನೊವ್ರು
* ಕೀಲಿ ಕೈ ಕಳೆದು ಹೋಯ್ತು ಅಂತ ಬಾಗಿಲು ಹೊಡಿಯೊರು
* ಕಾರು ಊರೊಳಿಕ್ಕೆ ಬಂತಂದ್ರೆ ಅದ್ರ ಹಿಂದೆ ಹತ್ತಾರು ಐಕ್ಳು
* ಮಾರಮ್ಮನ ಜಾತ್ರೆಗೆ ಮೈ ಮ್ಯಾಗೆ ಬರೊ ದೇವಿ
* ಬೇವಿನ್ ಸೊಪ್ಪು ಹಿಡ್ಕೊಂಡು ಆಕೆ ಸುತ್ತ ಕುಣ್ಣಿಯೊ ಭಕ್ತೆಯರು..
* ಒಬ್ರ ಮನೆಗೆ ಕಲರ್ ಟಿ.ವಿ ತಂದರೆ ಊರಿಗೆ ಹಬ್ಬ..
* ಯಾರಾದ್ರು ಸತ್ರೆ ತಮಟೆ ತರಿಸಿ ಎಳೆಯರಿಂದ ಗೆಳೆಯರವರೆಗು ಕುಣಿದು ಕುಪ್ಪಳಿಸುತಾರೆ
* ಮನೆ ದೀಪ ಆರಿಸಿ ಬೀದಿ ದೀಪದಲ್ಲಿ ಅಡುಗೆ ಮಾಡ್ತಾರೆ..
* ಪಕ್ಕದ ಮನೆಯವರ ಮನೆಲ್ಲಿ ಕುಳಿತು ಸಿರಿಯಲ್ ನೋಡ್ತಾರೆ.

ನಿಮ್ಮವ...
ನವಿ ..Thursday, February 10, 2011
ಮನಸ್ಸು-ಬುದ್ದಿಯ ಪಿಕಲಾಟ..
ಗಂಡ ಹೆಂಡತಿ ಜಗಳವಾಡಿದ ಬಳಿಕ..
ಒಳ ಮನಸ್ಸು: ಅವಳೊಂದಿಗೆ ಮಾತಾಡು ಅವ್ಳು ಖಂಡಿತ ನಿನ್ನನು ಕ್ಷಮಿಸುತಾಳೆ..
ಬುದ್ದಿ: ಹೇ.. ಅಂತ ತಪ್ಪು ನೀನೇನು ಮಾಡಿಲ್ಲ ತಪಾಯ್ತು ಅಂತ ಕೇಳಿದರೆ ನಾಳೆ ಇಂದ ನೀನು ಅವಳ ಗುಲಾಮಾ..ಒಳ ಮನಸ್ಸು ಪಾಪ ಅಳುತ ಇದ್ದಾಳೆ..
ಬುದ್ದಿ: ಅತ್ತರೆ ಅಳುತಾಳೆ ಬಿಡು ಬುದ್ದಿ ಬರಲಿ..ಒಳ ಮನಸ್ಸು ಛೇ!! ಕಣ್ಣೀರು ಆದರು ಒರೆಸಬೇಕು ನಾನು ಬೇರೆ ಯಾರಿಗೋ ತಲೆ ಬಾಗುತ್ತಿಲ್ಲ ನನ್ನ ಹೆಂಡತಿ ಅಲ್ಲವಾ??
ಬುದ್ದಿ: ಹೋಗು ಒರೆಸು ಅಮೇಲೆ ಮಾತು ಕೇಳು ಆಹಾ.. ಈಗ ಬಂದುಬಿಟ್ರ ಕಣ್ಣೀರು ಒರೆಸೊಕ್ಕೆ.. ಬಯೋವಾಗ ಎಲ್ಲಿತ್ತೊ ಬುದ್ದಿ ಅಂತ..ಒಳ ಮನಸ್ಸು ಪಾಪ ನೊಂದಿದ್ದಾಳೆ ಸಮಾಧಾನಾ ಹೇಳಿಬರುತೇನೆ...
ಬುದ್ದಿ: ಹೋಗು ಹೋಗು.. ವಾಪಾಸು ಬರೊದಿಲ್ಲ ನೀನು.. ಕಟ್ಟಿ ಹಾಕ್ತಾಳೆ.ಒಳ ಮನಸ್ಸು ಹೋಗು ಹೋಗು..
ಬುದ್ದಿ: ಬೇಡ ಎದ್ದು ಹೊರಗೆ ಬಾ...
ಎದ್ದು ಹೊರಗೆ ಬಂದ ನಂತರ...
ಒಳ ಮನಸ್ಸು ಛೇ!! ಏಕೆ ನನ್ನ ಮಾತು ಕೇಳೊಲ್ಲ...
ಬುದ್ದಿ: ನಿನ್ನ ಮಾತು ಕೇಳಿದರೆ ಅಷ್ಟೇ..ಒಳ ಮನಸ್ಸು ಹೊರಗೆ ಬರಬಾರದಿತು...
ಬುದ್ದಿ: ಬಂದಿದು ಒಳೆದಾಯ್ತು ಆ ಕೆಟ್ಟ ಮುಖ ನೋಡೋದು ತಪ್ಪಿತುಒಳ ಮನಸ್ಸು ಅತೀ ಆಯ್ತು ಆ ಮುಖವನ್ನೆ ನೋಡಿ ನೀನು ಮದುವೆಗೆ ಒಪ್ಪಿದು ನಿನಗೆ ಅವಳು ಮುದ್ದಿಸೊಕ್ಕೆ ಬೇಕು ಊಟ ಮಾಡಿಸೊಕ್ಕೆ ಬೇಕು ಜೊತೆಯಲ್ಲಿ ನಡೆಯಲು ಬೇಕು ಇದೀಗ ಬೇಡವಾದಳಾ??
ಬುದ್ದಿ: ಅದು ಅದು..ಒಳ ಮನಸ್ಸು ಈಗಲಾದರು ಒಳಗೆ ಹೋಗಿ ಸಮಧಾನಾಪಡಿಸು...
ಬುದ್ದಿ: ಹೋಗಪ್ಪ ಇನ್ನು ನನ್ನ ಮಾತಿಗೆ ಬೆಲೆ ಇಲ್ಲ.... :(ಒಳ ಮನಸ್ಸು :) :) :)

ನವಿ .. :)Monday, January 17, 2011
ಇದ್ದಕಿದಂತೆ ಬೆಲೆ ಏರಿಸೋ ಮಾರ್ಕೆಟ್ ಮಂದಿ...
ಹೀಗೆ ಮೊನ್ನೆ ನಮ್ಮ ನೆಂಟರೊಬ್ಬರು ದೈವದೀನರಾದರು ಸರಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಮುಖ ಕಡೆಯ ಬಾರಿ ಎಂಬಂತೆ ನೋಡಲು ಹೊರಟೆ... ದಾರಿಯಲ್ಲಿ ಹೋಗಬೇಕದರೆ ಅನಿಸಿತು ಬರಿಗೈಲ್ಲಿ ಹೇಗೆ ಹೋಗೊದು ಒಂದು ಹೂವಿನ ಹಾರ ತೆಗೆದುಕೊಳೊಣ ಅಂತಾ ಕೆ.ಆರ್.ಮಾರ್ಕೆಟ್ ಇಳಿದು ಹಾರ ತರಲು ಹೊರಟೆ..
ಅದುವರೆಗು ನಾನು ಯಾವತ್ತು ಹೂ ತರಲು ಹೋದವನೆ ಅಲ್ಲ ಅದರಲ್ಲೂ "ಕೆ.ಆರ್.ಮಾರ್ಕೆಟ್" ಎಂಬ "ಜನ ಜಾತ್ರೆಗೆ"...
ಕೆ.ಆರ್.ಮಾರ್ಕೆಟ್ ಎಂದರೆ ನನಗೆ ಕಾಲಿಟ್ಟರೆ ಜಾರಿ ಬೀಳುವಂತಾ ಗಲಿಜು ಕೊಳಚೆ ಜಾಗ ಎಂಬುದೆ ನೆನಪಗುತ್ತೆ.. ಒಳಗೆ ಹೋಗಿ ಕೆಳಗೆ ಇಳಿದು ನಡೆದುಕೊಂಡು ಹಾಗೆ ನೋಡುತಾ ಇದ್ದವನಿಗೆ ಇದ್ದಕಿದಂತೆ ಜ್ಞಾನೊದಯ ಆಯ್ತು ನಾನು ಹೀಗೆ ನೋಡುತಾ ನಿಂತಿದ್ರೆ ನನಗೆ ಟೋಪಿಯೊಂದನು ಆರಾಮಾಗಿ ತೊಡಿಸಿಬಿಡುತಾರೆ ಅಂತ.. ಏನೋ ಎಲ್ಲಾ ತಿಳಿದವನಂತೆ ನಟಿಸುತಾ ಬೇಗ ಬೇಗನೆ ಹೆಜ್ಜೆ ಹಾಕುತ್ತ ಹೊರಟೆ..
ಸರಿ ಒಂದು ಕಡೆ ನಿಂತು ಹಾರ ಎಷ್ಟು ಗುರು?
ಅಂದೆ ಅದಕ್ಕೆ ಅಲ್ಲಿದ ಹುಡುಗ ನನ್ನನು ನೋಡಿ(ನಾನು ಅವತ್ತು ಬಿಳಿಯ ಟಿ-ಶರ್ಟ್ ತೊಟ್ಟಿದೆ ನನ್ಗೆ ಅದು ಸ್ವಲ್ಪ ಚೆನ್ನಾಗಿ ಕಾಣ್ಣುತೆ ನಂಬ್ರಿ) 180 ರೂಪಾಯಿ ಅಂದ ನಾನು ಏನು ನಾ ಹೆಂಗ್ ಕಾಣಂತಾ ಇದ್ದಿನಿ ಬಕ್ರ ತರ ಇದ್ದಿನಾ?? ಸುಮ್ಮನೆ ಕೊಡೊ ರೇಟು ಮಾತಾಡು ಅಂದೆ ನೋಡಿ ಸಾರ್ ನಿಮ್ಮಗೆ ಒಂದು10ರೂಪಯಿ ಕಡಿಮ್ಮೆ ಕೊಡ್ತಿನಿ ಬೇಕಿದ್ರೆ ತೊಗೊಳಿ ಇಲ್ಲ ಅಂದ್ರೆ ಹೋಗಿ ಅಂದ.. ನಾನು ಎಲಾ ನನ್ ಮಗನೇ ನಿನ್ಗೆ ಇಷ್ಟೊಂದು ಬಿಲ್ಡ-ಅಪ್ ಬೇಕಾ ಅಂತಾ ಮುಂದೆ ಹೋದೆ.
ಅದುವರೆಗು ನಾನು ಯಾವತ್ತು ಹೂ ತರಲು ಹೋದವನೆ ಅಲ್ಲ ಅದರಲ್ಲೂ "ಕೆ.ಆರ್.ಮಾರ್ಕೆಟ್" ಎಂಬ "ಜನ ಜಾತ್ರೆಗೆ"...
ಸರಿ ಒಂದು ಕಡೆ ನಿಂತು ಹಾರ ಎಷ್ಟು ಗುರು?
ಅಂದೆ ಅದಕ್ಕೆ ಅಲ್ಲಿದ ಹುಡುಗ ನನ್ನನು ನೋಡಿ(ನಾನು ಅವತ್ತು ಬಿಳಿಯ ಟಿ-ಶರ್ಟ್ ತೊಟ್ಟಿದೆ ನನ್ಗೆ ಅದು ಸ್ವಲ್ಪ ಚೆನ್ನಾಗಿ ಕಾಣ್ಣುತೆ ನಂಬ್ರಿ) 180 ರೂಪಾಯಿ ಅಂದ ನಾನು ಏನು ನಾ ಹೆಂಗ್ ಕಾಣಂತಾ ಇದ್ದಿನಿ ಬಕ್ರ ತರ ಇದ್ದಿನಾ?? ಸುಮ್ಮನೆ ಕೊಡೊ ರೇಟು ಮಾತಾಡು ಅಂದೆ ನೋಡಿ ಸಾರ್ ನಿಮ್ಮಗೆ ಒಂದು10ರೂಪಯಿ ಕಡಿಮ್ಮೆ ಕೊಡ್ತಿನಿ ಬೇಕಿದ್ರೆ ತೊಗೊಳಿ ಇಲ್ಲ ಅಂದ್ರೆ ಹೋಗಿ ಅಂದ.. ನಾನು ಎಲಾ ನನ್ ಮಗನೇ ನಿನ್ಗೆ ಇಷ್ಟೊಂದು ಬಿಲ್ಡ-ಅಪ್ ಬೇಕಾ ಅಂತಾ ಮುಂದೆ ಹೋದೆ. ಹೋಗ್ತಾ ಇನೊಂದು 2 ಕಡೆ ವಿಚಾರಿಸಿದೆ 200ರೂಪಾಯಿ ಅಂತಾ ಅಂದ್ರು ಕಡಿಮೆ ಮಾಡಿಕೊಡ್ರಿ 2 ಹಾರ ತೊಗೊಬೇಕು ಅಂದ್ರೆ
350ರೂಪಾಯಿ ಕೊಡಿ ತೊಗೊಂಡ್ ಹೋಗಿ ಅಂತಾರೆ ಇದ್ಯಾಕೊ ಆಗೋ ಕೆಲಸ ಅಲ್ಲ ಅಂತ ಆ ಮುಂಚಿನ ಅಂಗಡಿ ಹುಡುಕುತಾ ಹೋದೆ.. (ಅಲ್ಲಿ ಅಂಗಡಿಗಳೆ ದೊಡ್ಡ Confusionu) ಕಡೆಗೂ ಸಿಕ್ತು ಆ ಅಂಗಡಿ, ಹುಡುಗ ನನ್ನ ನೋಡಿದ ಸರಿ ಕೊಡಪ್ಪ 2 ಹಾರ ಅಂದ್ರೆ ಆಸಾಮಿ 190 ಗುರು ರೇಟು ಅಂತಾ ಅನೋದಾ?? ಹಿಂಗೆ ಹೋಗಿ ಹಂಗೆ ಬರೋ ಅಷ್ಟ್ರಲ್ಲಿ ಏಕಪ್ಪಾ ರೇಟು ಏರಿಸಿ ಬಿಟಿದಿಯಾ ಅಂದ್ರೆ.. ಅವ್ನು ರೋಜಾ ಹೂವಾ ರೇಟು ಜಾಸ್ತಿ ಆಯ್ತು ಗುರು ಅದಕ್ಕೆ ಅಂತಂದಾ... ನೀನು ಅವಾಗ್ಲೆ ಇರೊ ಹೂವಾನೆ ತಾನೆ ಮಾರುತ ಇರೋದು ಹಾಗಿದ ಮೇಲೆ ಹಳೆ ರೇಟಿಗೆ ಹೂವಾ ಕೊಡು ಅಂದೆ ಅವ್ನು ಜಗಳಕ್ಕೆ ಬಿದ್ದ ಹಾಗೆ ನೋಡ್ ಗುರು ಬೇಕಾ ತೊಗೋ ಇಲ್ವಾ ಜಾಗ ಖಾಲಿ ಮಾಡು ಸುಮ್ನೆ ಯಾಕ್ ತಲೆ ತಿಂತಿಯ ಅಂತಾ ಬೈದೆಬಿಟ್ಟಾ..
350ರೂಪಾಯಿ ಕೊಡಿ ತೊಗೊಂಡ್ ಹೋಗಿ ಅಂತಾರೆ ಇದ್ಯಾಕೊ ಆಗೋ ಕೆಲಸ ಅಲ್ಲ ಅಂತ ಆ ಮುಂಚಿನ ಅಂಗಡಿ ಹುಡುಕುತಾ ಹೋದೆ.. (ಅಲ್ಲಿ ಅಂಗಡಿಗಳೆ ದೊಡ್ಡ Confusionu) ಕಡೆಗೂ ಸಿಕ್ತು ಆ ಅಂಗಡಿ, ಹುಡುಗ ನನ್ನ ನೋಡಿದ ಸರಿ ಕೊಡಪ್ಪ 2 ಹಾರ ಅಂದ್ರೆ ಆಸಾಮಿ 190 ಗುರು ರೇಟು ಅಂತಾ ಅನೋದಾ?? ಹಿಂಗೆ ಹೋಗಿ ಹಂಗೆ ಬರೋ ಅಷ್ಟ್ರಲ್ಲಿ ಏಕಪ್ಪಾ ರೇಟು ಏರಿಸಿ ಬಿಟಿದಿಯಾ ಅಂದ್ರೆ.. ಅವ್ನು ರೋಜಾ ಹೂವಾ ರೇಟು ಜಾಸ್ತಿ ಆಯ್ತು ಗುರು ಅದಕ್ಕೆ ಅಂತಂದಾ... ನೀನು ಅವಾಗ್ಲೆ ಇರೊ ಹೂವಾನೆ ತಾನೆ ಮಾರುತ ಇರೋದು ಹಾಗಿದ ಮೇಲೆ ಹಳೆ ರೇಟಿಗೆ ಹೂವಾ ಕೊಡು ಅಂದೆ ಅವ್ನು ಜಗಳಕ್ಕೆ ಬಿದ್ದ ಹಾಗೆ ನೋಡ್ ಗುರು ಬೇಕಾ ತೊಗೋ ಇಲ್ವಾ ಜಾಗ ಖಾಲಿ ಮಾಡು ಸುಮ್ನೆ ಯಾಕ್ ತಲೆ ತಿಂತಿಯ ಅಂತಾ ಬೈದೆಬಿಟ್ಟಾ.. ಸರಿ ಇವಾಗ ಇನೊಮ್ಮೆ ಹೋಗಿ ಅಂಗಡಿ ಸುತ್ತಿ ಬಂದ್ರೆ ಈ ಆಸಾಮಿ ಪಕ್ಕಾ 200 ರೂಪಾಯಿ ಅಂತಾನೆ ಅಂತಾ ಹೇಳಿ 2 ಹಾರ ತೊಗೊತಿನಿ 300
ರೂಪಾಯಿ ಹಾಕ್ಕೊ ಟೊಟಲ್ ರೇಟು ಅಂದೆ ಬರೊಲ್ಲಾ ಸಾರ್ ಅಂದ ಸದ್ಯ ಸ್ವಲ್ಪಾ ಮರ್ಯಾದೇ ಸಿಕ್ಕ್ತು ಅಂದ್ರೆ ನಮ್ಮ್ ರೂಟಿಗೆ ಬಂದಾ ಅಂತಾ ಹೇಳಿ ನೋಡ್ ಗುರು ಕೊಡೊ ಹಂಗಿದ್ರೆ ಕೊಡು ಇಲ್ವಾ ಬ್ಯಾಡ ಬಿಡು ಅಂತಾ ಹೊರಟೆ ಅವ್ನು ಬನ್ನಿ ಸಾರ್ ಕೊಡೋಣಾ ಅಂತಾ ಕವರ್ ಒಂದಕ್ಕೆ 2 ರೂಪಾಯಿ ಎಕ್ಸಟ್ರಾ ಕಿತ್ತ್ಕೊಂಡು ಹೂ ಕೊಟ್ಟಾ ನನ್ಗೆ ಕಾಡೊ ಪ್ರಶ್ನೆ ಅಂದ್ರೆ ಯಾಕೆ ಇದ್ಕಿದ ಹಾಗೆ ರೇಟು ಜಾಸ್ತಿ ಮಾಡಿದ್ರು ಅಂತಾ...??? 

ನಿಮ್ಮವ
ನವಿFriday, January 14, 2011
ಹೊರ ಬರಬೇಕಿತ್ತಾ?? ನಿನ್ನಿಂದ... ನಿನ್ನ ನೆನಪಿಂದ????
ಕಟ್ಟಿದ ಕನಸುಗಳಿಗೆ ಕಾವಲಾಗಿ
ಓಡೆದ ಮನಸುಗಳಿಗೆ ಆಸರೆಯಾಗಿ ಸ್ನೇಹಕ್ಕೆ ಸಾರತಿಯಗಿರುವೆ
ನೀ ಬಿಟ್ಟ ಕ್ಷಣದಿಂದ

ಸಂತೋಷ?? ಹಾ.. ಎಲ್ಲೋ ಕೆಲವೆಡೆ ಮಾತ್ರ ಮಿಕ್ಕಿದು ನಿನಗೆ ಗೊತ್ತಿದೆ ಅನಿಸುತ್ತೆ.. ನನಗೆ ಗೊತ್ತು ಇವೆಲ್ಲಾ ನೀನು ಓದುತೀಯಾ ಅಂತ ಆದರೂ ನೀ ಪ್ರತಿಕ್ರಯಿಸುವುದಿಲ್ಲ.. ನಾ ಅದನ್ನು ನಿರಿಕ್ಷಿಸುವುದಿಲ್ಲ...

ಜಗಳಗಳು ಸಾಮಾನ್ಯ ಅದರೆ ಒಂದು ಮಟ್ಟಕ್ಕೆ ಮಾತ್ರ... ಒಮ್ಮೆ ಮನಸ್ಸಿಗೆ ಘಾಸಿ ಅಗಿಬಿಟ್ಟರೆ ತುಂಬ ಕಷ್ಟಾಸಾದ್ಯ ಮತೆ ಒಂದು ಮಾಡಲು.. ನಿನ್ನ ನೆನಪಿಂದ ಹೊರ ಬರಲು ಸುಮಾರು ಸಮಯ ಬೇಕು ಇಗಲು ದಿನಕ್ಕೊಂದು ನೂರು ಬಾರಿಯಾದರು ನೆನಪಿಸಿಕೊಳುತ್ತೀನಿ

ಗೊತ್ತಿಲ್ಲ ನೀನು ಕೂಡ ನೆನಪಿಸಿಕೊಳುತೀಯ ಇಲ್ಲಾ ಮರೆತೇ ಬಿಟ್ಟಿದ್ಯ ಅಂತಾ ನಿನಗೆ ಫೋನ್ ಮಾಡಿದಾಗ ತುಂಬಾ ನೋವಾಯ್ತು ಕಣೇ..
ನಿನ್ನ ಮನಸಿಗೆ ಅಷ್ಟು ದೊಡ್ಡ ಘಾಸಿಯಾಗಿದೆ
ಅಂತ ಅವಾಗ ತಿಳಿಯಿತು ಮತ್ತೆಂದು ನಾನು ಫೋನ್ ಮಾಡೋಲ್ಲಾ ಹುಡುಗಿ.. ನಿನ್ನ ನೆನಪು ಸಾಕು ಖುಶಿಯಾಗಿರು... 
ನಿನ್ನ ಸಂತೋಷವನ್ನು ಹಾರೈಸುವಾ
--ನವಿ--
Thursday, January 13, 2011
ನೀನಿಲ್ಲದೇ ಜೀವನ ಸಾಗೋದೆ ಇಲ್ಲ ಅಂತಾ ಹೇಳ್ತಾ ಇದವನ್ನು ಇವತು ಆಕಸ್ಮಿಕವಾಗಿ ನಿನ್ನ ಫೋಟೊ
ಒಂದು ಸಿಕ್ಕಿದಾಗ ನಿನ್ನ ನೆನಪಾಯ್ತು... ಹಳೆಯ ನೆನಪುಗಳೊಂದಿಗೆ... ಏನೋ ಒಂದು ರೀತಿಯ ಹೊಸ ಅನುಭವ.. ಹಳೆಯ ಬಾಟ್ಲೆನಲ್ಲಿ ಹೊಸ ಮದ್ಯ ಬೆರೆತಂತ್ತೆ... ಇಲ್ಲಿ ಭೋರ್ಗರೆಯುತ್ತಿರುವ ಸಮುದ್ರದ ಅಲೆಗಳು ಎಂತಾ ಸುಮಧುರವಾದ ಭಾವನೆ ನೀಡುತ ಇದೆ ಗೊತ್ತಾ??
ತನ್ನ ದಿನದ ಕೆಲಸ ಮುಗಿಸಿ ಹೊರಡುತಿದಾನೆ.. ಇದರ ಜೊತೆಗೆ ನಿನ್ನ ಸುಂದರ ನೆನಪು.. ವ್ಹಾ!!!ಕಾಫೀಯ ಸಿಪ್ ಒಂದನ್ನು ತೆಗೆದುಕೊಂಡು ಪುನಃ ಜೇಬಿನಲ್ಲಿದ ನಿನ್ನ ಫೋಟೋ ಹೊರ ತೆಗೆದೇ ಏನು ಬದಲಾವಣೆ ಇಲ್ಲ ಅದೆ ನಗು ಅದೆ ಕಂಗಳು.. ಸುಂದರ ಛೇ!! ಸುಂದರ ಎನುವುದಕ್ಕಿಂತ ಲಕ್ಷಣ ಎನ್ನಬಹುದು... ಮಾತೇ ಆಡದೇ ಮೌನವಾಗಿ ನಿನ್ನ ಪ್ರೀತಿಸಿದೆ.. ಕಡೆಯವರೆಗೂ ನಿನಗೆ ಹೇಳದೆನೆ ಉಳಿದೆ...
ನಮ್ಮ ಕ್ಲಾಸಿನ ಹುಡುಗಿಯೊಬ್ಬಳಿಗೆ ಮದುವೆಯಾದಾಗ ಅವಳನ್ನು ಪ್ರೀತಿಸುತ್ತಿದ್ದ ಹುಡುಗನಿಗೆ ಅವಳು ಸಿಗದೇ ಅವನು ಮನಸಾರೆ ಅತ್ತಾಗಲೇ ನನಗೆ ತಿಳಿದಿದು ಇಷ್ಟು ನೋವಾಗುತ್ತೆ ಅಂತಾ.. ನನಗೆ ಅಂತಾ ಪರಿಸ್ತಿತಿಯು ಬರಲಿಲ್ಲ ನೀ ಅದಕ್ಕೆ ಎಡೆ ಮಾಡಿ ಕೂಡ ಕೊಡಲಿಲ್ಲ ಬಿಡು..
ನಿನ್ನ ಜೊತೆ ಮಾತು ಕಡಿಮೆ ನನ್ನದು ಆದರೆ ಮೆಸೆಜು ಜಾಸ್ತಿ... ಅದರೆ ಒಂದು ಸಣ್ಣ ಭಿನಾಭಿಪ್ರಾಯದ ಕಾರಣ ನಮ್ಮ ಮಾತು ನಿಂತು ಹೋಯ್ತು.. ನೀನು ಈ ಊರಿಂದ ಹೊರಟು ಹೋದೆ ನಂಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿತು.. Contact ಅನ್ನೋದು ತಪ್ಪಿ ಹೋಯ್ತು..
ಓಹೋ ಮಳೆ ಶುರುವಾಯ್ತು ಹೊರಗೆ ಹೋಗಿ ಮಳೆಯಲ್ಲಿ ನೆನೆಯಬೇಕೆನಿಸುತಿದೆ... ಆಹಾ!! ಮೊದಲ ಹನಿಯೊಂದು ಎಡ ಕೆನ್ನೆಯ ಮೇಲೆ ಬಿತ್ತು ಅದರೊಂದಿಗೆ ಮತ್ತೆ ನಿನ್ನ ನೆನಪಯ್ತು.. ಕಳೆದು ಹೋದ ಮುತ್ತನ್ನು ಹುಡುಕುವಂತೆ ಕಣ್ಣು ನಿನ್ನ ಬಿಂಬವನ್ನು ನೆನಪಿಸಿಕೊಳುತ್ತಾ ಇದೆ... ಮೇಲೆ ಮಿಂಚೊಂದು ಸರಿದಾಡಿತು....
ನಿನ್ನನ್ನು ಏಕಿಷ್ಟು ಪ್ರೀತಿಸಿದೆ?? ಕಾರಣವಿಲ್ಲದೆ... ನಿನ್ನ ನಗು ನನ್ನನ್ನು ಸೆಳೆದಿರಬಹುದು, ನಿನ್ನ ನೋಟ, ಮಾತಡುವ ಶೈಲಿ, ಮುಗ್ಡತೆ... ಒಬ್ಬ ಪ್ರಸಿದ್ದ ಬರಹಗಾರ ಹೇಳುವಂತೆ ಮನಸ್ಸು ನೋಡಿ ಯಾರು ಪ್ರೀತಿ ಮಾಡುವುದಿಲ್ಲ ಮೊದಲು ಅವರ ಫಿಸಿಕಲ್ ಬಾಡಿ ನೋಡಿ ಆಕರ್ಷಿತರಾಗ್ತರೇ ಆಮೇಲೆ ಪ್ರೀತಿಯ ಮಾತು ಅಂತಾ ಬಹುಶಃ ನನಗೂ ಹಾಗೇ ಇದ್ದಿರಬಹುದು...
ನಿಮ್ಮವ
ನವಿ
Monday, January 3, 2011
ತಿಕ್ಲುರಲ್ಲಿ.. ತೀರಿಹೋದಾ ಸುದಿಗಾರ
ವಾರ್ತೆಗಳಿಗೆ ಸ್ವಾಗತ ನಾನು ಸಂಪಂಗಿನಗರದ ಸಾವಿತ್ರಮ್ಮ
... ಹಲವಾರು ದಿನಗಳಿಂದ ಇದ್ದಬದ್ದ ಸುದ್ದಿಯನ್ನು ಬಾವಿ ಇಂದ ಹೊರ ಹಾಕುತ್ತಿದ ನಮ್ಮ ಸುದ್ದಿ ಸಂಪದಕರಾದ ಒಂದೆದೇ ಒರೆ ಮಾದಪ್ಪ ಇಂದು ಬೆಳಿಗ್ಗೆ ನಿಧನರದರೆಂದು ಹೇಳಲು ವಿಶಾದಿಸುತೇವೆ...
ಇದರ ಬಗ್ಗೆ ಹೆಚಿನ ಮಾಹಿತಿ ನೀಡಲು ನಮ್ಮೊಂದಿಗೆ ಈಗ ನಮ್ಮವರೆ ಆದ ಕೋಳಿ ಕಳ್ಳ ಇದ್ದಾರೆ..
ಸಸ- ಹೇಳಿ ಕೋಳಿ ಕಳ್ಳ ಅವ್ರೆ ಕೇಳ್ಸ್ತ ಇದ್ದಿಯಾ??
(ಕೊಕ- ಹಾ!! ಈವಾಗ ಈವಾಗ ಕೇಳ್ಸ್ತು ಹೇಳಣ್ಣ..
ಸಸ- ಅಯ್ಯೊ ಕೋತ್ ನನ್ ಮಗನೇ ನಾನು ಅಣ್ಣ ಅಲ್ಲ ಕಣ್ಳಾ ಅಕ್ಕ
ಕೊಕ- ಅಯ್ಯೋ!! ಮತ್ತೆ ಇವತು ವಾರ್ತೆ ಓದೊಕೆ ತರ್ಲೆ ತಿಮ್ಮಪ್ಪ ಮತೆ ಬೀಡಿ ಬೋರಣ್ಣ ಅಲ್ವಾ ಬರಬೇಕು ನೀ ಒಬ್ಳೆ ಯಾಕ್ ಬಂದೇ??
ಸಸ- ಅವ್ರಿಬ್ರು ಕೊಡಂಗಿ ಹಾಡಿತು ಕೋಳಿ ಹಾರಿತು ನೋಡೋಕ್ ಹೋದ್ರಲ್ಲಾ ಮತೆ ನಿನ್ ಹೆಂಡ್ರು ಚನ್ನಗವ್ಳಾ?
ಕೊಕ- ಅಯ್ಯೋ!! ಅದ್ಯಕ್ ಕೇಳ್ತಿಯಕ್ಕ ಅವ್ಳು, ನನ್ ಮಗ ಇಬ್ರು ಬಡ್ಕೊತಾನೆ ಇರ್ತಾರೆ
ಸಸ- ಅದ್ಯಾಕಲ್ಲಾ?
ಕೊಕ- ಇವ್ಳು ಬೆಳಿಗ್ಗೆ ಹೊತ್ನಾಗೆ ಬಡ್ಕೊಂಡ್ರೆ ಅವಾ ರಾತ್ರೆ ಕಣ್ಣಕ್ಕ ಒಟ್ಟರೆಯಾಗಿ ಹೇಳ್ಬೆಕಂದ್ರೆ ನನ್ಗೆ ನೆಮ್ಮದಿ ಸಿಕ್ತಾ ಇಲ್ಲ
ಸಸ- ವಾರ್ತೆ ಹೇಳೊ ಹೋಗ್ಲಿ ಇವಾಗ)
ಕೊಕ- ಹೇಳಿ ಹೇಳಿ ಮಡಮ್ ಇವಾಗ ಕೆಳ್ಸ್ತಅಯ್ತೆ..
ಸಸ- ಕೋಳಿ ಕಳ್ಳ ಇವಾಗ ಅಲ್ಲಿನ ಪರಿಸ್ತಿತಿ ಹೆಂಗಿದೆ??
ಕೊಕ- ಹಾ.......... ಇವಾಗ ನೀವೆನು ನೋಡ್ತಾ ಇದ್ದಿರಾ?? ಈ ಆರ್ಥನಾದಗಳು, ಈ ಅಳುವ ಶಬ್ಡಗಳು ಇವರ ಅಕ್ರಂಧನ ಮುಗಿಲು ಮುಟುತಾ ಇದೆ ಅಂತಾನೆ ಹೇಳ್ಬೋದು..
ಸಸ- ಅವ್ರ ಸಾವು ಹೇಗಾಯ್ತು ಅಂತ ಹೇಳ್ತಿರ ಕೋಳಿ ಕಳ್ಳ?
ಕೊಕ- ಇವ್ರು ನಮ್ಮ ಒಂದೆದೇ ಒರೆ ಮಾದಪ್ಪ ಏನಿದ್ರು ಆ ಬಾವಿನಲ್ಲಿ
(ಸ್ವಲ್ಪಾ ಝುಮ್ ಹಾಕೋ ಬಾವಿಗೆ ಬ್ಯಾತ್ನಾ) ಅವ್ರು ಒಂದು ತಪ್ಪು ಮಾಡಿ ಈ ಒಂದು ಸಾವಿಗೆ ಶರಣಾಗಿದಾರೆ ಅಂತಾನೆ ಹೇಳ್ಬೋದು ಸಾವಿತ್ರಮ್ಮ.
ಸಸ- ಅದು ಹೇಗೆ ಹೇಗೆ ನಡಿತು ಹೇಳಿ ??
ಕೊಕ- ಇವ್ರು ಏನು ಈ ಬಾವಿನಲ್ಲಿ ಬಿದಿದ್ರೋ ಆಗ ಸುದ್ದಿ ಹುಡ್ಕ್ತ ಹುಡ್ಕ್ತ ಉಸಿರು ತೊಗೋಳೊದ್ನಾ ಮರೆತು ಹಾಗೆ ತಮ್ಮ ಪ್ರಾಣದ ಪಕ್ಷಿ ಏನಿತೋ ಅದನ್ನಾ ಹಾರಿ ಹೋಗೊಲು ಬಿಟ್ಟಿದಾರೆ..(ಕಚಡ ಗಲೀಜು ನನ್ ಮಗ)
ಸಸ- ಇವರನ್ನು ಅಗಲಿ ನಮ್ಮ ಈ ಒಂದು ಚಾನೆಲ್ ಏನು ಇದೆ ಅದು ತುಂಬಾ ಸಂತಾಪನ ವ್ಯಕ್ತ ಪಡಿಸುತ್ತೆ
ಕೊಕ- ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ ನಮ್ಮ ದೇಶ ಇಂದು ಒಬ್ಬ ಒಳ್ಳೆಯ ಸುದ್ದಿಗಾರನನ್ನು ಕಳೆದುಕೊಂಡಿದೆ (ಬಾರೊ ಬ್ಯಾತ್ನಾ ಶೂಟ್ ಮುಗಿದಾದ್ ಮೇಲೆ ಎಣ್ಣೆ ಹಾಕೊಣ್ಣ ಇದೇ ಖುಶಿಗೆ) ಅಂತಾನೆ ಹೇಳ್ಬೋದು..
ಸಸ- ತುಂಬಾ ದುಃಖಾ ಆಗ್ತಾ ಇದೆ (ಒಂಡು ಅಡ್ವೆರ್ಟಯ್ಸೆಮೆನ್ಟ್ ಅದ್ರು ಹಾಕ್ರೋ)
ಕೊಕ- ಕ್ಯಾಮೆರಾ ಮೆನ್ ಬ್ಯಾತ್ನಾ
ಜೊತೆ ಕೋಳಿ ಕಳ್ಳ
ಒತಿಕೆತ ಚಾನ್ನೆಲ್ ತಿಕ್ಲುರು..
ಸಸ- ಸುದ್ದಿಗಾಗಿ ಧನ್ಯವಾದ....
ಈಗ ಸಣ್ಣದಂದು ಬ್ರೇಕ್... ನಂತರ ವಾರ್ತೆ ಮುಂದುವರೆಯುತದೆ....
... ಹಲವಾರು ದಿನಗಳಿಂದ ಇದ್ದಬದ್ದ ಸುದ್ದಿಯನ್ನು ಬಾವಿ ಇಂದ ಹೊರ ಹಾಕುತ್ತಿದ ನಮ್ಮ ಸುದ್ದಿ ಸಂಪದಕರಾದ ಒಂದೆದೇ ಒರೆ ಮಾದಪ್ಪ ಇಂದು ಬೆಳಿಗ್ಗೆ ನಿಧನರದರೆಂದು ಹೇಳಲು ವಿಶಾದಿಸುತೇವೆ... ಇದರ ಬಗ್ಗೆ ಹೆಚಿನ ಮಾಹಿತಿ ನೀಡಲು ನಮ್ಮೊಂದಿಗೆ ಈಗ ನಮ್ಮವರೆ ಆದ ಕೋಳಿ ಕಳ್ಳ ಇದ್ದಾರೆ..
ಸಸ- ಹೇಳಿ ಕೋಳಿ ಕಳ್ಳ ಅವ್ರೆ ಕೇಳ್ಸ್ತ ಇದ್ದಿಯಾ??
(ಕೊಕ- ಹಾ!! ಈವಾಗ ಈವಾಗ ಕೇಳ್ಸ್ತು ಹೇಳಣ್ಣ..
ಸಸ- ಅಯ್ಯೊ ಕೋತ್ ನನ್ ಮಗನೇ ನಾನು ಅಣ್ಣ ಅಲ್ಲ ಕಣ್ಳಾ ಅಕ್ಕ
ಕೊಕ- ಅಯ್ಯೋ!! ಮತ್ತೆ ಇವತು ವಾರ್ತೆ ಓದೊಕೆ ತರ್ಲೆ ತಿಮ್ಮಪ್ಪ ಮತೆ ಬೀಡಿ ಬೋರಣ್ಣ ಅಲ್ವಾ ಬರಬೇಕು ನೀ ಒಬ್ಳೆ ಯಾಕ್ ಬಂದೇ??
ಸಸ- ಅವ್ರಿಬ್ರು ಕೊಡಂಗಿ ಹಾಡಿತು ಕೋಳಿ ಹಾರಿತು ನೋಡೋಕ್ ಹೋದ್ರಲ್ಲಾ ಮತೆ ನಿನ್ ಹೆಂಡ್ರು ಚನ್ನಗವ್ಳಾ?
ಕೊಕ- ಅಯ್ಯೋ!! ಅದ್ಯಕ್ ಕೇಳ್ತಿಯಕ್ಕ ಅವ್ಳು, ನನ್ ಮಗ ಇಬ್ರು ಬಡ್ಕೊತಾನೆ ಇರ್ತಾರೆ
ಸಸ- ಅದ್ಯಾಕಲ್ಲಾ?
ಕೊಕ- ಇವ್ಳು ಬೆಳಿಗ್ಗೆ ಹೊತ್ನಾಗೆ ಬಡ್ಕೊಂಡ್ರೆ ಅವಾ ರಾತ್ರೆ ಕಣ್ಣಕ್ಕ ಒಟ್ಟರೆಯಾಗಿ ಹೇಳ್ಬೆಕಂದ್ರೆ ನನ್ಗೆ ನೆಮ್ಮದಿ ಸಿಕ್ತಾ ಇಲ್ಲ
ಸಸ- ವಾರ್ತೆ ಹೇಳೊ ಹೋಗ್ಲಿ ಇವಾಗ)
ಕೊಕ- ಹೇಳಿ ಹೇಳಿ ಮಡಮ್ ಇವಾಗ ಕೆಳ್ಸ್ತಅಯ್ತೆ..
ಸಸ- ಕೋಳಿ ಕಳ್ಳ ಇವಾಗ ಅಲ್ಲಿನ ಪರಿಸ್ತಿತಿ ಹೆಂಗಿದೆ??
ಕೊಕ- ಹಾ.......... ಇವಾಗ ನೀವೆನು ನೋಡ್ತಾ ಇದ್ದಿರಾ?? ಈ ಆರ್ಥನಾದಗಳು, ಈ ಅಳುವ ಶಬ್ಡಗಳು ಇವರ ಅಕ್ರಂಧನ ಮುಗಿಲು ಮುಟುತಾ ಇದೆ ಅಂತಾನೆ ಹೇಳ್ಬೋದು..
ಸಸ- ಅವ್ರ ಸಾವು ಹೇಗಾಯ್ತು ಅಂತ ಹೇಳ್ತಿರ ಕೋಳಿ ಕಳ್ಳ?
ಕೊಕ- ಇವ್ರು ನಮ್ಮ ಒಂದೆದೇ ಒರೆ ಮಾದಪ್ಪ ಏನಿದ್ರು ಆ ಬಾವಿನಲ್ಲಿ
(ಸ್ವಲ್ಪಾ ಝುಮ್ ಹಾಕೋ ಬಾವಿಗೆ ಬ್ಯಾತ್ನಾ) ಅವ್ರು ಒಂದು ತಪ್ಪು ಮಾಡಿ ಈ ಒಂದು ಸಾವಿಗೆ ಶರಣಾಗಿದಾರೆ ಅಂತಾನೆ ಹೇಳ್ಬೋದು ಸಾವಿತ್ರಮ್ಮ.ಸಸ- ಅದು ಹೇಗೆ ಹೇಗೆ ನಡಿತು ಹೇಳಿ ??
ಕೊಕ- ಇವ್ರು ಏನು ಈ ಬಾವಿನಲ್ಲಿ ಬಿದಿದ್ರೋ ಆಗ ಸುದ್ದಿ ಹುಡ್ಕ್ತ ಹುಡ್ಕ್ತ ಉಸಿರು ತೊಗೋಳೊದ್ನಾ ಮರೆತು ಹಾಗೆ ತಮ್ಮ ಪ್ರಾಣದ ಪಕ್ಷಿ ಏನಿತೋ ಅದನ್ನಾ ಹಾರಿ ಹೋಗೊಲು ಬಿಟ್ಟಿದಾರೆ..(ಕಚಡ ಗಲೀಜು ನನ್ ಮಗ)
ಸಸ- ಇವರನ್ನು ಅಗಲಿ ನಮ್ಮ ಈ ಒಂದು ಚಾನೆಲ್ ಏನು ಇದೆ ಅದು ತುಂಬಾ ಸಂತಾಪನ ವ್ಯಕ್ತ ಪಡಿಸುತ್ತೆ
ಕೊಕ- ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ ನಮ್ಮ ದೇಶ ಇಂದು ಒಬ್ಬ ಒಳ್ಳೆಯ ಸುದ್ದಿಗಾರನನ್ನು ಕಳೆದುಕೊಂಡಿದೆ (ಬಾರೊ ಬ್ಯಾತ್ನಾ ಶೂಟ್ ಮುಗಿದಾದ್ ಮೇಲೆ ಎಣ್ಣೆ ಹಾಕೊಣ್ಣ ಇದೇ ಖುಶಿಗೆ) ಅಂತಾನೆ ಹೇಳ್ಬೋದು..
ಸಸ- ತುಂಬಾ ದುಃಖಾ ಆಗ್ತಾ ಇದೆ (ಒಂಡು ಅಡ್ವೆರ್ಟಯ್ಸೆಮೆನ್ಟ್ ಅದ್ರು ಹಾಕ್ರೋ)
ಕೊಕ- ಕ್ಯಾಮೆರಾ ಮೆನ್ ಬ್ಯಾತ್ನಾ
ಜೊತೆ ಕೋಳಿ ಕಳ್ಳ
ಒತಿಕೆತ ಚಾನ್ನೆಲ್ ತಿಕ್ಲುರು..ಸಸ- ಸುದ್ದಿಗಾಗಿ ಧನ್ಯವಾದ....
ಈಗ ಸಣ್ಣದಂದು ಬ್ರೇಕ್... ನಂತರ ವಾರ್ತೆ ಮುಂದುವರೆಯುತದೆ....
Friday, December 31, 2010
ಇಂದಿನ ಪ್ರಮುಖ ಸುದ್ದಿಗಳು...
1. ಪಾಟ್ ಹೋಲ್ ತುಳಿದು ಪರ್ಮಾತ್ಮನ ಪಾದಾ ಸೇರಿದ ದೈವಭಕ್ತೆ ಹೆಸರಲ್ಲಿ ಗುಡಿ
2. ಇಂದು "ಕೊಡಂಗಿ ಹಾಡಿತು ಕೋಳಿ ಹಾರಿತು" ಚಿತ್ರ ರಾಜ್ಯದ್ಯಂತ ಬಿಡುಗಡೆ ಸಮಾರಂಭಕ್ಕೆ ಶ್ರೇಷ್ಠ ನಟರಾದ ಕುಹು ಕುಹು ಆಗಮನ..
3. ಚಳಿಗಾಲದಲ್ಲಿ ಶೆಕೆ ಆಯಿತೆಂದುಬಿಬಿಎಂಪಿಗೆ ಛೀಮಾರಿ ಹಾಕಿದ ಜಯಮ್ಮ..
4.ವೀರಪ್ಪನ್ ಅತ್ಮಕ್ಕೆ ಶಾಂತಿ ಸಿಕ್ಕಿಲ್ಲವೆಂದು ಮಾಡಿದ ಧರಣಿ ಇಂದು ಮುಕ್ತಯ..
ಸುದ್ಹಿ ಇನ್ನು ಇದೆ ದಯವಿಟ್ಟು ನಿರೀಕ್ಷಿಸಿ....
2. ಇಂದು "ಕೊಡಂಗಿ ಹಾಡಿತು ಕೋಳಿ ಹಾರಿತು" ಚಿತ್ರ ರಾಜ್ಯದ್ಯಂತ ಬಿಡುಗಡೆ ಸಮಾರಂಭಕ್ಕೆ ಶ್ರೇಷ್ಠ ನಟರಾದ ಕುಹು ಕುಹು ಆಗಮನ..
3. ಚಳಿಗಾಲದಲ್ಲಿ ಶೆಕೆ ಆಯಿತೆಂದು
4.
ಸುದ್ಹಿ ಇನ್ನು ಇದೆ ದಯವಿಟ್ಟು ನಿರೀಕ್ಷಿಸಿ....
Tuesday, December 28, 2010
ಕಾಡಿದ ನೆನಪುಗಳ ಹುಡುಕುತ ಅಲೆದೆ
ಮತ್ತೆ ಕಾಡಿದೆ ನಿನ್ನ ನೆನಪು
ಮಳೆಯಲಿ ನೆನೆವಾಗ
ಮಲಗಿ ಕನಸು ಕಾಣುವಾಗ
ಎಡವಿ ಬೀಳುವಾಗ
ಕೈ ಮೇಲೆ ನಿನ್ ಹೆಸರ ಹಚ್ಚೆ ನೋಡಿದಾಗ
ಪುಸ್ತಕವ ತೆಗೆದಾಗ
ನಿನ್ನ ಸುವಾಸನೆಯಿರುವ
ನವಿಲು ಗರಿಗಳನ್ನ
ನೋಡಿದಾಗ ಪುನಃ ನೆನಪುಗಳುಮಳೆಯಲಿ ನೆನೆವಾಗ
ಮಲಗಿ ಕನಸು ಕಾಣುವಾಗ
ಎಡವಿ ಬೀಳುವಾಗ
ಕೈ ಮೇಲೆ ನಿನ್ ಹೆಸರ ಹಚ್ಚೆ ನೋಡಿದಾಗ
ಪುಸ್ತಕವ ತೆಗೆದಾಗ
ನಿನ್ನ ಸುವಾಸನೆಯಿರುವ
ನವಿಲು ಗರಿಗಳನ್ನ
ಕಾಡಹತಿದೇ...
ಕತ್ತಲು ಕವಿದಾಗ ಅಳುವ ನಿಶ್ಯಬ್ಡ
ಕಂಗಳು ಮತ್ತೆ ಹುಡುಕ ಹತ್ತಿವೆ
ನಿನ್ನ ನೆನಪುಗಳ..
ಗಂಟಲಿನ್ನಿಂದಚೆಗೆ ಬಾರದ
ಶಬ್ದದ ಒಳಗೂ ನಿನ್ನ ಹೆಸರಿದೆ
ಕೂಗಿದರೆ ಬರುವೆಯ??
ಎಂಬ ಪ್ರಶ್ನೆಗೆ ಉತರವಿಲ್ಲದೆ
ನೆನಪಾಗಿದೆ ನಿನ್ನ
ನೆನಪುಗಳ...
ಕಣ್ಣಲ್ಲಿ ನೀರೆಕೆ ಮೂಡಿದೇ??
ಇಂದಿನ ಪ್ರಮುಖ ಸುದ್ದಿಗಳು...

1.ಬಾರಿಂದ ಬಂದ ಗಂಡನಿಗೆ ಬಾಗಿಲಲ್ಲಿ ಕಾದು ಒದೆ ತಿಂದ ಹೆಂಗಸು..
2.ಗಲಾಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ, ರೊಚ್ಚಿಗೆದ ಡ್ರೈವರಿಂದ ಪ್ರತಿಭಟನೆ..
3.ಕರೆಂಟ್ ಹೋಯಿತೆಂದು ಕಾಡಿಗೆ ಹೊರಟ ಉದ್ಯಾನನಗರಿಯ ಯುವಕ..
4.ಮಾಲ್ ಒಂದರಲ್ಲಿ ಅಗ್ನಿ ದುರಂತ ಮಳೆರಾಯನ ಆರ್ಭಟಕ್ಕೆ ತಗ್ಗಿದ ಅಗ್ನಿದೇವ
5.ಪಕ್ಕದ ಮನೆಯ ಪೆಟ್ಟಿಗೆ ಮೇಲೆ ಕಣ್ಣಿಟಿದ ಯುವಕನಿಗೆ ಗುಂಡೆಟು ಇಟ್ಟ ಯುವತಿ ..
6.ಕನಸಲ್ಲಿ ಬಂದಳೆಂದು ಪದ್ಯ ಬರೆದ ಹುಡುಗನಿಗೆ ಸಿಕ್ಕ ಜ್ಞಾನಪೀಠ ಪ್ರಶಸ್ತಿ...
7.ಟೆಸ್ಟ್ ಕ್ರಿಕೆಟ್ ಸೋತೆವೆಂದು ಮರಳಿ ಮನೆಗೆ ಬಾರಾದೆ ಇನೊಂದು ಪಂದ್ಯ ಆಡಿಸಿ ಗೆಲುತೆವೆ ಎನ್ನುತಿರುವ ಕ್ರಿಕೆಟಿಗರು...

ತಾಜಾ ಸುದ್ಹಿ ಇನ್ನು ಇದೆ ದಯವಿಟ್ಟು ನಿರೀಕ್ಷಿಸಿ....
Subscribe to:
Posts (Atom)