Showing posts with label ಸಾಗರದ ಮುತ್ತು ನೀನು... Show all posts
Showing posts with label ಸಾಗರದ ಮುತ್ತು ನೀನು... Show all posts

Friday, January 14, 2011

ಹೊರ ಬರಬೇಕಿತ್ತಾ?? ನಿನ್ನಿಂದ... ನಿನ್ನ ನೆನಪಿಂದ????

ಕಟ್ಟಿದ ಕನಸುಗಳಿಗೆ ಕಾವಲಾಗಿ
ಓಡೆದ ಮನಸುಗಳಿಗೆ ಆಸರೆಯಾಗಿ 
ಸ್ನೇಹಕ್ಕೆ ಸಾರತಿಯಗಿರುವೆ
ನೀ ಬಿಟ್ಟ ಕ್ಷಣದಿಂದ


ಸಂತೋಷ?? ಹಾ.. ಎಲ್ಲೋ ಕೆಲವೆಡೆ ಮಾತ್ರ ಮಿಕ್ಕಿದು ನಿನಗೆ ಗೊತ್ತಿದೆ ಅನಿಸುತ್ತೆ.. ನನಗೆ ಗೊತ್ತು ಇವೆಲ್ಲಾ ನೀನು ಓದುತೀಯಾ ಅಂತ ಆದರೂ ನೀ ಪ್ರತಿಕ್ರಯಿಸುವುದಿಲ್ಲ.. ನಾ ಅದನ್ನು ನಿರಿಕ್ಷಿಸುವುದಿಲ್ಲ...

ಜಗಳಗಳು ಸಾಮಾನ್ಯ ಅದರೆ ಒಂದು ಮಟ್ಟಕ್ಕೆ ಮಾತ್ರ... ಒಮ್ಮೆ ಮನಸ್ಸಿಗೆ ಘಾಸಿ ಅಗಿಬಿಟ್ಟರೆ ತುಂಬ ಕಷ್ಟಾಸಾದ್ಯ ಮತೆ ಒಂದು ಮಾಡಲು.. ನಿನ್ನ ನೆನಪಿಂದ ಹೊರ ಬರಲು ಸುಮಾರು ಸಮಯ ಬೇಕು ಇಗಲು ದಿನಕ್ಕೊಂದು ನೂರು ಬಾರಿಯಾದರು ನೆನಪಿಸಿಕೊಳುತ್ತೀನಿ


ಗೊತ್ತಿಲ್ಲ ನೀನು ಕೂಡ ನೆನಪಿಸಿಕೊಳುತೀಯ ಇಲ್ಲಾ ಮರೆತೇ ಬಿಟ್ಟಿದ್ಯ ಅಂತಾ ನಿನಗೆ ಫೋನ್ ಮಾಡಿದಾಗ ತುಂಬಾ ನೋವಾಯ್ತು ಕಣೇ..

ನಿನ್ನ ಮನಸಿಗೆ ಅಷ್ಟು ದೊಡ್ಡ ಘಾಸಿಯಾಗಿದೆ
ಅಂತ ಅವಾಗ ತಿಳಿಯಿತು ಮತ್ತೆಂದು ನಾನು ಫೋನ್ ಮಾಡೋಲ್ಲಾ ಹುಡುಗಿ.. ನಿನ್ನ ನೆನಪು ಸಾಕು ಖುಶಿಯಾಗಿರು...

ನಿನ್ನ ಸಂತೋನ್ನು ಹಾರೈಸುವಾ

--ನವಿ--

Thursday, January 13, 2011



ನೀನಿಲ್ಲದೇ ಜೀವನ ಸಾಗೋದೆ ಇಲ್ಲ ಅಂತಾ ಹೇಳ್ತಾ ಇದವನ್ನು ಇವತು ಆಕಸ್ಮಿಕವಾಗಿ ನಿನ್ನ ಫೋಟೊ ಒಂದು ಸಿಕ್ಕಿದಾಗ ನಿನ್ನ ನೆನಪಾಯ್ತು... ಹಳೆಯ ನೆನಪುಗಳೊಂದಿಗೆ... ಏನೋ ಒಂದು ರೀತಿಯ ಹೊಸ ಅನುಭವ.. ಹಳೆಯ ಬಾಟ್ಲೆನಲ್ಲಿ ಹೊಸ ಮದ್ಯ ಬೆರೆತಂತ್ತೆ... ಇಲ್ಲಿ ಭೋರ್ಗರೆಯುತ್ತಿರುವ ಸಮುದ್ರದ ಅಲೆಗಳು ಎಂತಾ ಸುಮಧುರವಾದ ಭಾವನೆ ನೀಡುತ ಇದೆ ಗೊತ್ತಾ??

ನಿಮಿಷಕ್ಕೆ ನಾಲ್ಕು ಮೆಸೇಜುಗಳನ್ನು ಮಾಡುತ್ತ ಇದ್ದ ಹುಡುಗಿ ಇಂದು ಎಲ್ಲಿದಿಯಾ ಅಂತಾನು ನಂಗೆ ತಿಳಿದಿಲ್ಲ ನಾನು ಎಲ್ಲಿದೀನಿ ಅಂತಾ ನಿನಗೂ ತಿಳಿದಿಲ್ಲ.. ಭೋರ್ಗರೆಯುವ ಅಲೆಗಳೊಂದಿಗೆ ಮಾತನಾಡುತಾ ಕುಳಿತು ಬಿಡೋಣ ಅನ್ನಿಸುತಾ ಇದೇ ಸೂರ್ಯ ತಂಪಾಗಿ ಕೆಂಪಾಗಿ ತನ್ನ ದಿನದ ಕೆಲಸ ಮುಗಿಸಿ ಹೊರಡುತಿದಾನೆ.. ಇದರ ಜೊತೆಗೆ ನಿನ್ನ ಸುಂದರ ನೆನಪು..       ವ್ಹಾ!!!

ಕಾಫೀಯ ಸಿಪ್ ಒಂದನ್ನು ತೆಗೆದುಕೊಂಡು ಪುನಃ ಜೇಬಿನಲ್ಲಿದ ನಿನ್ನ ಫೋಟೋ ಹೊರ ತೆಗೆದೇ ಏನು ಬದಲಾವಣೆ ಇಲ್ಲ ಅದೆ ನಗು ಅದೆ ಕಂಗಳು.. ಸುಂದರ ಛೇ!! ಸುಂದರ ಎನುವುದಕ್ಕಿಂತ ಲಕ್ಷಣ ಎನ್ನಬಹುದು... ಮಾತೇ ಆಡದೇ ಮೌನವಾಗಿ ನಿನ್ನ ಪ್ರೀತಿಸಿದೆ.. ಕಡೆಯವರೆಗೂ ನಿನಗೆ ಹೇಳದೆನೆ ಉಳಿದೆ...

ನಮ್ಮ ಕ್ಲಾಸಿನ ಹುಡುಗಿಯೊಬ್ಬಳಿಗೆ ಮದುವೆಯಾದಾಗ ಅವಳನ್ನು ಪ್ರೀತಿಸುತ್ತಿದ್ದ ಹುಡುಗನಿಗೆ ಅವಳು ಸಿಗದೇ ಅವನು ಮನಸಾರೆ ಅತ್ತಾಗಲೇ ನನಗೆ ತಿಳಿದಿದು ಇಷ್ಟು ನೋವಾಗುತ್ತೆ ಅಂತಾ.. ನನಗೆ ಅಂತಾ ಪರಿಸ್ತಿತಿಯು ಬರಲಿಲ್ಲ ನೀ ಅದಕ್ಕೆ ಎಡೆ ಮಾಡಿ ಕೂಡ ಕೊಡಲಿಲ್ಲ ಬಿಡು..

ನಿನ್ನ ಜೊತೆ ಮಾತು ಕಡಿಮೆ ನನ್ನದು ಆದರೆ ಮೆಸೆಜು ಜಾಸ್ತಿ... ಅದರೆ ಒಂದು ಸಣ್ಣ ಭಿನಾಭಿಪ್ರಾಯದ ಕಾರಣ ನಮ್ಮ ಮಾತು ನಿಂತು ಹೋಯ್ತು.. ನೀನು ಈ ಊರಿಂದ ಹೊರಟು ಹೋದೆ ನಂಗೆ ಬೇರೆ ಊರಿನಲ್ಲಿ ಕೆಲಸ ಸಿಕ್ಕಿತು.. Contact ಅನ್ನೋದು ತಪ್ಪಿ ಹೋಯ್ತು.. 

ಓಹೋ ಮಳೆ ಶುರುವಾಯ್ತು ಹೊರಗೆ ಹೋಗಿ ಮಳೆಯಲ್ಲಿ ನೆನೆಯಬೇಕೆನಿಸುತಿದೆ... ಆಹಾ!! ಮೊದಲ ಹನಿಯೊಂದು ಎಡ ಕೆನ್ನೆಯ ಮೇಲೆ ಬಿತ್ತು ಅದರೊಂದಿಗೆ ಮತ್ತೆ ನಿನ್ನ ನೆನಪಯ್ತು.. ಕಳೆದು ಹೋದ ಮುತ್ತನ್ನು ಹುಡುಕುವಂತೆ ಕಣ್ಣು ನಿನ್ನ ಬಿಂಬವನ್ನು ನೆನಪಿಸಿಕೊಳುತ್ತಾ ಇದೆ... ಮೇಲೆ ಮಿಂಚೊಂದು ಸರಿದಾಡಿತು....

ನಿನ್ನನ್ನು ಏಕಿಷ್ಟು ಪ್ರೀತಿಸಿದೆ?? ಕಾರಣವಿಲ್ಲದೆ... ನಿನ್ನ ನಗು ನನ್ನನ್ನು ಸೆಳೆದಿರಬಹುದು, ನಿನ್ನ ನೋಟ, ಮಾತಡುವ ಶೈಲಿ, ಮುಗ್ಡತೆ... ಒಬ್ಬ ಪ್ರಸಿದ್ದ ಬರಹಗಾರ ಹೇಳುವಂತೆ ಮನಸ್ಸು ನೋಡಿ ಯಾರು ಪ್ರೀತಿ ಮಾಡುವುದಿಲ್ಲ ಮೊದಲು ಅವರ ಫಿಸಿಕಲ್ ಬಾಡಿ ನೋಡಿ ಆಕರ್ಷಿತರಾಗ್ತರೇ ಆಮೇಲೆ ಪ್ರೀತಿಯ ಮಾತು ಅಂತಾ ಬಹುಶಃ ನನಗೂ ಹಾಗೇ ಇದ್ದಿರಬಹುದು...


ನಿಮ್ಮವ 

ನವಿ

Tuesday, December 28, 2010

ಕಾಡಿದ ನೆನಪುಗಳ ಹುಡುಕುತ ಅಲೆದೆ

ಮತ್ತೆ ಕಾಡಿದೆ ನಿನ್ನ ನೆನಪು
ಮಳೆಯಲಿ ನೆನೆವಾಗ
ಮಲಗಿ ಕನಸು ಕಾಣುವಾಗ
ಎಡವಿ ಬೀಳುವಾಗ
ಕೈ ಮೇಲೆ ನಿನ್ ಹೆಸರ ಹಚ್ಚೆ ನೋಡಿದಾಗ

ಪುಸ್ತಕವ ತೆಗೆದಾಗ
ನಿನ್ನ ಸುವಾಸನೆಯಿರುವ
ನವಿಲು ಗರಿಗಳನ್ನ
ನೋಡಿದಾಗ ಪುನಃ ನೆನಪುಗಳು
ಕಾಡಹತಿದೇ...

ಕತ್ತಲು
ಕವಿದಾಗ ಅಳುವ ನಿಶ್ಯಬ್ಡ
ಕಂಗಳು ಮತ್ತೆ ಹುಡುಕ ಹತ್ತಿವೆ
ನಿನ್ನ ನೆನಪುಗಳ..

ಗಂಟಲಿನ್ನಿಂದಚೆಗೆ ಬಾರದ
ಶಬ್ದದ ಒಳಗೂ ನಿನ್ನ ಹೆಸರಿದೆ
ಕೂಗಿದರೆ ಬರುವೆಯ??
ಎಂಬ ಪ್ರಶ್ನೆಗೆ ಉತರವಿಲ್ಲದೆ
ನೆನಪಾಗಿದೆ ನಿನ್ನ
ನೆನಪುಗಳ...


ನನ್ನದಲ್ಲದ ನಿನ್ನ ನೆನೆವಾಗ
ಕಣ್ಣಲ್ಲಿ ನೀರೆಕೆ ಮೂಡಿದೇ??