Showing posts with label ನನ್ ವಾರ್ತ ಪ್ರಸಾರ. Show all posts
Showing posts with label ನನ್ ವಾರ್ತ ಪ್ರಸಾರ. Show all posts

Monday, January 3, 2011

ತಿಕ್ಲುರಲ್ಲಿ.. ತೀರಿಹೋದಾ ಸುದಿಗಾರ

ವಾರ್ತೆಗಳಿಗೆ ಸ್ವಾಗತ ನಾನು ಸಂಪಂಗಿನಗರದ ಸಾವಿತ್ರಮ್ಮ... ಹಲವಾರು ದಿನಗಳಿಂದ ಇದ್ದಬದ್ದ ಸುದ್ದಿಯನ್ನು ಬಾವಿ ಇಂದ ಹೊರ ಹಾಕುತ್ತಿದ ನಮ್ಮ ಸುದ್ದಿ ಸಂಪದಕರಾದ ಒಂದೆದೇ ಒರೆ ಮಾದಪ್ಪ ಇಂದು ಬೆಳಿಗ್ಗೆ  ನಿಧನರದರೆಂದು ಹೇಳಲು ವಿಶಾದಿಸುತೇವೆ... 

ಇದರ ಬಗ್ಗೆ ಹೆಚಿನ ಮಾಹಿತಿ ನೀಡಲು ನಮ್ಮೊಂದಿಗೆ ಈಗ ನಮ್ಮವರೆ ಆದ ಕೋಳಿ ಕಳ್ಳ ಇದ್ದಾರೆ..

ಸಸ- ಹೇಳಿ ಕೋಳಿ ಕಳ್ಳ ಅವ್ರೆ ಕೇಳ್ಸ್ತ ಇದ್ದಿಯಾ?? 
(ಕೊಕ- ಹಾ!! ಈವಾಗ ಈವಾಗ ಕೇಳ್ಸ್ತು ಹೇಳಣ್ಣ..
ಸಸ- ಅಯ್ಯೊ ಕೋತ್ ನನ್ ಮಗನೇ ನಾನು ಅಣ್ಣ ಅಲ್ಲ ಕಣ್ಳಾ ಅಕ್ಕ
ಕೊಕ- ಅಯ್ಯೋ!! ಮತ್ತೆ ಇವತು ವಾರ್ತೆ ಓದೊಕೆ ತರ್ಲೆ ತಿಮ್ಮಪ್ಪ ಮತೆ ಬೀಡಿ ಬೋರಣ್ಣ ಅ
ಲ್ವಾ ಬರಬೇಕು ನೀ ಒಬ್ಳೆ ಯಾಕ್ ಬಂದೇ??
ಸಸ- ಅವ್ರಿಬ್ರು ಕೊಡಂಗಿ ಹಾಡಿತು ಕೋಳಿ ಹಾರಿತು ನೋಡೋಕ್ ಹೋದ್ರಲ್ಲಾ ಮತೆ ನಿನ್ ಹೆಂಡ್ರು ಚನ್ನಗವ್ಳಾ?
ಕೊಕ- ಅಯ್ಯೋ!! ಅದ್ಯಕ್ ಕೇಳ್ತಿಯಕ್ಕ ಅವ್ಳು, ನನ್ ಮಗ ಇಬ್ರು ಬಡ್ಕೊತಾನೆ ಇರ್ತಾರೆ
ಸಸ- ಅದ್ಯಾಕಲ್ಲಾ?
ಕೊಕ- ಇವ್ಳು ಬೆಳಿಗ್ಗೆ ಹೊತ್ನಾಗೆ ಬಡ್ಕೊಂಡ್ರೆ ಅವಾ ರಾತ್ರೆ ಕಣ್ಣಕ್ಕ ಒಟ್ಟರೆಯಾಗಿ ಹೇಳ್ಬೆಕಂದ್ರೆ ನನ್ಗೆ ನೆಮ್ಮದಿ ಸಿಕ್ತಾ ಇಲ್ಲ
ಸಸ- ವಾರ್ತೆ ಹೇಳೊ ಹೋಗ್ಲಿ ಇವಾಗ)
ಕೊಕ- ಹೇಳಿ ಹೇಳಿ ಮಡಮ್ ಇವಾಗ ಕೆಳ್ಸ್ತಅಯ್ತೆ..
ಸಸ- ಕೋಳಿ ಕಳ್ಳ ಇವಾಗ ಅಲ್ಲಿನ ಪರಿಸ್ತಿತಿ ಹೆಂಗಿದೆ??
ಕೊಕ- ಹಾ.......... ಇವಾಗ ನೀವೆನು ನೋಡ್ತಾ ಇದ್ದಿರಾ?? ಈ ಆರ್ಥನಾದಗಳು, ಈ ಅಳುವ ಶಬ್ಡಗಳು ಇವರ ಅಕ್ರಂಧನ ಮುಗಿಲು ಮುಟುತಾ ಇದೆ ಅಂತಾನೆ ಹೇಳ್ಬೋದು..
ಸಸ- ಅವ್ರ ಸಾವು ಹೇಗಾಯ್ತು ಅಂತ ಹೇಳ್ತಿರ ಕೋಳಿ ಕಳ್ಳ?
ಕೊಕ- ಇವ್ರು ನಮ್ಮ ಒಂದೆದೇ ಒರೆ ಮಾದಪ್ಪ ಏನಿದ್ರು ಆ ಬಾವಿನಲ್ಲಿ
(ಸ್ವಲ್ಪಾ ಝುಮ್ ಹಾಕೋ ಬಾವಿಗೆ ಬ್ಯಾತ್ನಾ) ಅವ್ರು ಒಂದು ತಪ್ಪು ಮಾಡಿ ಈ ಒಂದು ಸಾವಿಗೆ ಶರಣಾಗಿದಾರೆ ಅಂತಾನೆ ಹೇಳ್ಬೋದು ಸಾವಿತ್ರಮ್ಮ.
ಸಸ- ಅದು ಹೇಗೆ ಹೇಗೆ ನಡಿತು ಹೇಳಿ ??
ಕೊಕ- ಇವ್ರು ಏನು ಈ ಬಾವಿನಲ್ಲಿ ಬಿದಿದ್ರೋ ಆಗ ಸುದ್ದಿ ಹುಡ್ಕ್ತ ಹುಡ್ಕ್ತ ಉಸಿರು ತೊಗೋಳೊದ್ನಾ ಮರೆತು ಹಾಗೆ ತಮ್ಮ ಪ್ರಾಣದ ಪಕ್ಷಿ ಏನಿತೋ  ಅದನ್ನಾ ಹಾರಿ ಹೋಗೊಲು ಬಿಟ್ಟಿದಾರೆ..(ಕಚಡ ಗಲೀಜು ನನ್ ಮಗ)
ಸಸ- ಇವರನ್ನು ಅಗಲಿ ನಮ್ಮ ಈ ಒಂದು ಚಾನೆಲ್ ಏನು ಇದೆ ಅದು ತುಂಬಾ ಸಂತಾಪನ ವ್ಯಕ್ತ ಪಡಿಸುತ್ತೆ
ಕೊಕ- ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ ನಮ್ಮ ದೇಶ ಇಂದು ಒಬ್ಬ ಒಳ್ಳೆಯ ಸುದ್ದಿಗಾರನನ್ನು ಕಳೆದುಕೊಂಡಿದೆ (ಬಾರೊ
ಬ್ಯಾತ್ನಾ ಶೂಟ್ ಮುಗಿದಾದ್ ಮೇಲೆ ಎಣ್ಣೆ ಹಾಕೊಣ್ಣ ಇದೇ ಖುಶಿಗೆ) ಅಂತಾನೆ ಹೇಳ್ಬೋದು..
ಸಸ- ತುಂಬಾ ದುಃಖಾ ಆಗ್ತಾ ಇದೆ (ಒಂಡು ಅಡ್ವೆರ್ಟಯ್ಸೆಮೆನ್ಟ್ ಅದ್ರು ಹಾಕ್ರೋ)
ಕೊಕ- ಕ್ಯಾಮೆರಾ ಮೆನ್ ಬ್ಯಾತ್ನಾ
ಜೊತೆ ಕೋಳಿ ಕಳ್ಳ ಒತಿಕೆತ ಚಾನ್ನೆಲ್ ತಿಕ್ಲುರು..
ಸಸ- ಸುದ್ದಿಗಾಗಿ ಧನ್ಯವಾದ.... 


ಈಗ ಸಣ್ಣದಂದು ಬ್ರೇಕ್... ನಂತರ ವಾರ್ತೆ ಮುಂದುವರೆಯುತದೆ....

Friday, December 31, 2010

ಇಂದಿನ ಪ್ರಮುಖ ಸುದ್ದಿಗಳು...

1. ಪಾಟ್ ಹೋಲ್ ತುಳಿದು ಪರ್ಮಾತ್ಮನ ಪಾದಾ ಸೇರಿದ ದೈವಭಕ್ತೆ ಹೆಸರಲ್ಲಿ ಗುಡಿ

2. ಇಂದು "ಕೊಡಂಗಿ ಹಾಡಿತು ಕೋಳಿ ಹಾರಿತು" ಚಿತ್ರ ರಾಜ್ಯದ್ಯಂತ ಬಿಡುಗಡೆ ಸಮಾರಂಭಕ್ಕೆ ಶ್ರೇಷ್ಠ ನಟರಾದ ಕುಹು ಕುಹು ಆಗಮನ..

3. ಚಳಿಗಾಲದಲ್ಲಿ ಶೆಕೆ ಆಯಿತೆಂದು ಬಿಬಿಎಂಪಿಗೆ ಛೀಮಾರಿ ಹಾಕಿದ ಜಯಮ್ಮ..

4. ವೀರಪ್ಪನ್ ಅತ್ಮಕ್ಕೆ ಶಾಂತಿ ಸಿಕ್ಕಿಲ್ಲವೆಂದು ಮಾಡಿದ ಧರಣಿ ಇಂದು ಮುಕ್ತಯ..

ಸುದ್ಹಿ ನ್ನು ದೆ ವಿಟ್ಟು  ನಿರೀಕ್ಷಿಸಿ....

Tuesday, December 28, 2010

ಇಂದಿನ ಪ್ರಮುಖ ಸುದ್ದಿಗಳು...



1.ಬಾರಿಂದ ಬಂದ ಗಂಡನಿಗೆ ಬಾಗಿಲಲ್ಲಿ ಕಾದು ಒದೆ ತಿಂದ ಹೆಂಗಸು.. 
2.ಗಲಾಟೆಯಲ್ಲಿ ಬಸ್ಸಿಗೆ ಕಲ್ಲು ತೂರಾಟ, ರೊಚ್ಚಿಗೆದ ಡ್ರೈವರಿಂದ ಪ್ರತಿಭಟನೆ..
3.ಕರೆಂಟ್ ಹೋಯಿತೆಂದು ಕಾಡಿಗೆ ಹೊರಟ ಉದ್ಯಾನನಗರಿಯ ಯುವಕ..
4.ಮಾಲ್ ಒಂದರಲ್ಲಿ ಅಗ್ನಿ ದುರಂತ ಮಳೆರಾಯನ ಆರ್ಭಟಕ್ಕೆ ತಗ್ಗಿದ ಅಗ್ನಿದೇವ
5.ಪಕ್ಕದ ಮನೆಯ ಪೆಟ್ಟಿಗೆ ಮೇಲೆ ಕಣ್ಣಿಟಿದ ಯುವಕನಿಗೆ ಗುಂಡೆಟು ಇಟ್ಟ ಯುವತಿ ..
6.ಕನಸಲ್ಲಿ ಬಂದಳೆಂದು ಪದ್ಯ ಬರೆದ ಹುಡುಗನಿಗೆ ಸಿಕ್ಕ ಜ್ಞಾನಪೀಠ  ಪ್ರಶಸ್ತಿ...
7.ಟೆಸ್ಟ್ ಕ್ರಿಕೆಟ್ ಸೋತೆವೆಂದು ಮರಳಿ ಮನೆಗೆ ಬಾರಾದೆ ಇನೊಂದು ಪಂದ್ಯ ಆಡಿಸಿ ಗೆಲುತೆವೆ ಎನ್ನುತಿರುವ  ಕ್ರಿಕೆಟಿಗರು...










ತಾಜಾ ಸುದ್ಹಿ ನ್ನು ದೆ ವಿಟ್ಟು  ನಿರೀಕ್ಷಿಸಿ....