Showing posts with label ಕವನ. Show all posts
Showing posts with label ಕವನ. Show all posts

Tuesday, December 28, 2010

ಕಾಡಿದ ನೆನಪುಗಳ ಹುಡುಕುತ ಅಲೆದೆ

ಮತ್ತೆ ಕಾಡಿದೆ ನಿನ್ನ ನೆನಪು
ಮಳೆಯಲಿ ನೆನೆವಾಗ
ಮಲಗಿ ಕನಸು ಕಾಣುವಾಗ
ಎಡವಿ ಬೀಳುವಾಗ
ಕೈ ಮೇಲೆ ನಿನ್ ಹೆಸರ ಹಚ್ಚೆ ನೋಡಿದಾಗ

ಪುಸ್ತಕವ ತೆಗೆದಾಗ
ನಿನ್ನ ಸುವಾಸನೆಯಿರುವ
ನವಿಲು ಗರಿಗಳನ್ನ
ನೋಡಿದಾಗ ಪುನಃ ನೆನಪುಗಳು
ಕಾಡಹತಿದೇ...

ಕತ್ತಲು
ಕವಿದಾಗ ಅಳುವ ನಿಶ್ಯಬ್ಡ
ಕಂಗಳು ಮತ್ತೆ ಹುಡುಕ ಹತ್ತಿವೆ
ನಿನ್ನ ನೆನಪುಗಳ..

ಗಂಟಲಿನ್ನಿಂದಚೆಗೆ ಬಾರದ
ಶಬ್ದದ ಒಳಗೂ ನಿನ್ನ ಹೆಸರಿದೆ
ಕೂಗಿದರೆ ಬರುವೆಯ??
ಎಂಬ ಪ್ರಶ್ನೆಗೆ ಉತರವಿಲ್ಲದೆ
ನೆನಪಾಗಿದೆ ನಿನ್ನ
ನೆನಪುಗಳ...


ನನ್ನದಲ್ಲದ ನಿನ್ನ ನೆನೆವಾಗ
ಕಣ್ಣಲ್ಲಿ ನೀರೆಕೆ ಮೂಡಿದೇ??