ಮನಸ್ಸಿಲ್ಲದ ಮನಸಲ್ಲಿ
ಹೊರಟು ಹೋದಳು
ಕನಸಿಲ್ಲದ ಕಂಗಳು
ಬಾಡಿ ಹೋದವು
ನಿನ್ನೊಂದಿಗೆ ನಡೆದ
ಹೆಜ್ಜೆಗಳು ಇಂದು
ಕೇವಲ ನೆನಪಾಗಿದೇ
ನೆನೆದಿದ್ದಾ ಆ ಮಳೆಯ
ಕೊರೆವ ಚಳಿಗೆ ತಬ್ಬಿ ಕುಳಿತದ್ದು
ಶೀತಾ ಕಡಿಮೆಯಾಗದೆ
ಮೆಣಸಿನ ಅನ್ನ ತಿಂದದ್ದು
ಕೇವಲ ನೆನಪೇ ??
ಯಾರು ಬೇಗನೆ ರೆಪ್ಪೆ
ಮುಚ್ಚುವರೆಂದು ಒಬ್ಬರನ್ನೊಬ್ಬರು
ನೋಡುತಾ ಆಟವ ಮರೆತು
ಕುಳಿತಿದ್ದು ನೆನಪೇ ??
ಹುಡುಗಿ??
ನಿನ್ನ ದಾರಿಯಾ ಕಾಯುತ್ತಾ
ಕುಳಿತಿದವನಿಗೆ ನೆಪಾ ಹೇಳಿ
ನಗಿಸುತಿದದ್ದು ನೆನಪೇ ??
ಇಂದು ಅದೆಲ್ಲಾ ನೆನಪೇ....
ಗಟ್ಟಿಮೇಳವೆಂದು ಹೇಳುವಾವರೆಗು
ನೀ ನನ್ನೊಂದಿಗೆ ಬರುವೇ
ಎಂಬುದು ಮಾತ್ರವೇ ಬ್ರಹ್ಮೆಯೇ..
ನೀ ನನ್ನ ನೋಡಲಾಗದೇ
ತಲೆ ತಗಿಸಿದ್ದು ಇಂದು
ನೆನಪೇ... ಚೆಂದದ ಹುಡುಗಿ
ನೀ ನೆನಪಾಗಿಯೇ ಉಳಿದೇ...
ನನ್ ಈ ಬಾಳಲಿ ನೀ
ಶಾಶ್ವತವಾದ ನೆನಪೇ...
ಇಂತಿ ನಿಮ್ಮವ
Nವಿ....
ಬದುಕಿನಲಿ ನೆನಪುಗಳು ಅದೆಷ್ಟು ಪಾತ್ರ ವಹಿಸುತ್ತೆ ಅಲ್ವಾ..ನೆನಪುಗಳೆಂದರೇ ಹಾಗೆ ವ್ಯಕ್ತಿ ಇಲ್ಲವಾದರೂ ನೆನಪುಗಳು ಮಾತ್ರ ಶಾಶ್ವತ
ReplyDeleteಅಹುದು ನೆನಪುಗಳೆಂಬುದೇ ಹಾಗೇ ನೋವೊಂದೇ ಅಲ್ಲಾ ನಲಿವನ್ನು ಬಿಟ್ಟು ಹೋಗಿರುತ್ತದೆ ನಮ್ಮ ನಮ್ಮ ಭಾವನೆಗಳಿಗೆ ತಕ್ಕಂತೆ ಅದು ಸ್ಪಂದಿಸುತ್ತದೆ... ನಿಮ್ಮ ಕಮೆಂಟ್-ಗೆ ಧನ್ಯವಾದಗಳು ಪದ್ಮಾ... :)
ReplyDelete