ಅಪ್ಪನ ಕೋಪ, ಧರ್ಪ.. ಹೊಡೆಸಿಕೊಂಡ ಮೇಲೆ ಅಮ್ಮನ ಮುಸಿ ಮುಸಿ ಅಳು ನನ್ನನ್ನು ದಿಗ್ಬ್ರಮೆಗೊಳಿಸಿಬಿಟ್ಟಿತು. ನಾನು ಬೆಳೆದ ವಾತವರ್ಣ ನನ್ನನು ಮುಗ್ದಳನಾಗಿಸಿಬಿಟ್ಟಿತು, ಭಯ ನನ್ನನು ಅವರಸಿಕೊಂಡಿತ್ತು, ನನ್ನ ಕನಸುಗಳು ಕನಸಾಗಿಯೇ ಉಳಿದು ಹೋಗುತಿತ್ತು. ನಾನು ಏನಾದರೂ ಕೇಳಿದರೆ? ಅಮ್ಮನಿಗೆ ಹೊಡೆಯುವಂತೆ ಅಪ್ಪ ನಂಗು ಹೊಡಿಯುವನೆಂಬ ಭಯ!! ಮನದ ಮೂಲೆಯಲ್ಲಾವರಸಿ ಬಿಟ್ಟಿತು..
ಅಪ್ಪ ಎಂದರೆ ನನ್ನ ಪಾಲಿಗೆ ಅವನೊಬ್ಬ ಕುಡುಕಾ, ಹೊಡೆಯೆಲೆಂದೆ ಮನೆಗೆ ಬರುವ ರಕ್ಕಸ, ಅಮ್ಮನನು ಗೋಳು ಹೊಯ್ದುಕೊಳ್ಳುವಾತ ಎಂಬುದಷ್ಟೇ ಗೊತಿತ್ತು, ಆದರೆ ?? ನನ್ನ ಮೆಲೆ ಒಮ್ಮೆಯು ಕೈ ಮಾಡಿರಲಿಲ್ಲ ನನಗೆಂದು ಆಗಾಗ ಕೇಕು, ಬೊಂಡ, ಚೋವ್ ಚೋವು ತಂದುಕೊಡುತ್ತಿದ್ದ. ಜೇಬಿಗೆ ಕೈ ಹಾಕಿ ಕೈಗೆ ಸಿಕ್ಕಷ್ಟು ಚಿಲ್ಲರೆ ಕಾಸು ಕೈಗಿಡುತಿದ್ದ. ಇಷ್ಟು ಒಳ್ಳೆಯಾ ಅಪ್ಪ ಅಮ್ಮನನ್ನು ಕಂಡರೆ ಮಾತ್ರ ಹಾಗೆ ರೇಗಾಡುತಾನಲ್ಲ ?? ಎಂದುಕೊಳುತಿದ್ದೆ.
ಒಂದು ಬೆಳಗೆ ನನ್ನ ಅಮ್ಮ ಸೀರೆಯಲ್ಲಿ ನೇತಾಡುತಿದ್ದದನು ಕಂಡೆ, ಅದನ್ನು ಸಾವು ಎಂದರು ಸುತ್ತಾ ಜನ ಅಳುತ ಕುತ್ತಿದರು, ಅಪ್ಪ ಬಂಡಿ ಒಂದನ್ನು ತಂದು, ನನ್ನನು "ಮನೆಯಲ್ಲೇ ಇರು" ಎಂದು ಹೇಳಿ ಅಮ್ಮನನ್ನು ಅದರಲ್ಲಿ ಮಲಗಿಸಿ ಕರೆದೊಯ್ಡಾ. ಮನೆಯ ತುಂಬಾ ಜನ ಗೊಳೋ ಎಂದು ಅಳುತ ಇದ್ದಾರೆ ಅಪ್ಪಾನೇ ಅಮ್ಮನನ್ನು ಸಾಯಿಸಿದ್ದು ಎಂದು ಹೇಳುತ್ತಿದ್ದಾರೆ !!!
ವರ್ಷಕ್ಕೊಮ್ಮೆ ಶಾಲೆಯಲ್ಲಿ ನಮ್ ಮ್ಯಾಡಮ್ಮು ದುಡ್ಡು ಕೇಳಿದಾಗ ಅಪ್ಪ ಬಂದು ಕೊಟ್ಟು, ನನ್ಗೆ "ಚೆನ್ನಾಗಿ ಓದ್ಬೇಕು" ಎಂದು ಹೇಳಿ ಹೋಗ್ತಿದ್ದ. ಶಾಲೆ ಒಳ್ಗೆ ಒಂದು ದಿವ್ಸಾ ಹೊಟ್ಟಿ ಹಿಂಡ್ಕೊಂಡಂಗಾತು ಮೊಗ್ಗು ಅರಳಿ ಹೂವಾಗುವಂತೆ ನಾ ಹೆಣ್ಣಾಗಿದೇ, ನನ್ನ ಶಾಸ್ತ್ರವನ್ನು ಅಪ್ಪ ಸಂತಸದಿಂದ ಮಾಡಿಸ್ದಾ. ಅದದಾ ಮೇಲೆ ನಾ ಇರೊವರೆಗು ಅವ್ನು ಜಗ್ಗ್ಲಿ ಮೇಲೆಯೇ ಮಲ್ಗ್ತಿದಾ.
ನನ್ನ ಹತ್ತನೇ ತರಗತಿಯ ಫಲಿತಾಂಶ ಹೊರ ಬಂತು, ಅಪ್ಪ ಅದನ್ನು ಕೇಳಿ "ಓದಿದು ಸಾಕು ಮದುವೆಯಾಗು" ಎಂದ ನಾನು ಏನು ಮಾತಡಲಿಲ್ಲ, ಅಪ್ಪ ಹೊರಟು ಹೋದ. ಒಂದು ವಾರದ ನಂತರ "ನಿನಗೆ ನೋಡೊಕ್ಕೆ ಗಂಡು ಬರ್ತಾನೆ ಒಳ್ಳೆ ಮನೆತನದವ್ನು ನಿನ್ಗೆ ಒಳ್ಳೆಯ ಜೋಡಿ ಆಗಿರ್ತಾನೆ ತೊಗೊ ಈ ಸೀರೆ ಉಟ್ಕೊ" ಎಂದು ಹೊಸದೊಂದು ಸೀರೆ ಕೈಗಿತ್ತಾ.
ನನ್ನ ಮದುವೆ ನಿಶ್ಚಯ್ವಾಯ್ತು, ಅಪ್ಪ ಮದುವೆಯನ್ನು ತನ್ನ ಕೈಲಿ ಆದ ಮಟ್ಟಿಗೆ ಮಾಡಿದ, ಪದ್ದತಿಯಂತೆ ನಮ್ಮ ಮನೆಯಲ್ಲೇ 2 ದಿನ ಕಳೆದೆವು ನಂತರ ನಾನು ನನ್ನ ಗಂಡನ ಮನೆಗೆ ಹೊರಡುವ ಸಮಯ ಬಂತು.
ನಾನು ಹೊರಟು ಬರುತೆನೆಂದು ಅಪ್ಪನ ಕಾಲಿಗೆ ನಮ್ಸ್ಕರಿಸಿದೆ ಅಪ್ಪ ಆಶಿರ್ವದಿಸಿದ, ಅವ್ನ ಅಳಿಯನನ್ನು ಬಳಿಗೆ ಕರೆದು "ನನ್ನ ಮಗಳು ಏನೂ ಅರೆಯದ ಕೂಸು ಅವ್ಳು ತಪ್ಪು ಮಾಡಿದ್ದಲ್ಲಿ ಕ್ಷಮಿಸಿ ಬಿಡಿ, ಇಲ್ಲಿ ನಾನು ಇದುವರೆಗೂ ಆಕೆ ಮೇಲೆ ಕೈ ಮಾಡಿಲ್ಲ ದಯವಿಟ್ಟು ಆಕೆನ ಚೆನ್ನಾಗಿ ನೋಡಿಕೊಳ್ಳಿ ಎಂದ" ನನ್ನ ಕಣಂಚ್ಚಲ್ಲಿ ನೀರಿತ್ತು. ಬಂಡಿಯೊಳಗೆ ಕುಳಿತು ಅಪ್ಪನಿಗಾಗಿ ಹುಡುಕಿದೆ, ಮೂಲೆಯಲ್ಲಿ ಮಗುವಿನಂತೆ ಅಳುತಾ ನಿಂತಿದ್ದಾ...
ಅಪ್ಪ ಕೆಟ್ಟವನಾ??
ಇಂತಿ ನಿಮ್ಮವ...
ನವಿ