ಬೇಸತ್ತು ಹೋಗಿರುವೆ ನೆನಪುಗಳಿಂದ.
ಕಾಣಬೇಕಿದೆ ನಿನ್ನೊಮ್ಮೆ
ಮರೆಯಬೇಕಿದೆ ಜಗವನೊಮ್ಮೆ
ನಿನ್ನ ತೋಳಲ್ಲಿ ಬಂಧಿಸೊಮ್ಮೆ
ಕೇವಲ ಒಮ್ಮೆ...
ಮಾತನಾಡಿದೆ
ನಿನ್ನ ನೆನಪುಗಳೊಂದಿಗೆ
ಮತ್ತೆ ಕಾಡಿದೆ
ಹಳೆಯ ವಿಷಯಗಳೊಂದಿಗೆ
ನಿನ್ನ ಪ್ರೀತಿಯ ನೆನಪುಗಳೊಂದಿಗೆ
ನಡೆಯುವ ಹಾದಿಯೂ ಏಕೋ
ಬೇಸರ ತಂದಿದೆ
ನೋಡುವ ಕಂಗಳು ನೀನಿಲ್ಲದೇ
ಅಳುತ ಹಾಡಿವೆ
ಕಾಣಬೇಕಿದೆ ನಿನ್ನ ಒಮ್ಮೆಲೆ
ಕೇವಲ ಒಮ್ಮೆ
ಎನ್ನುವ ಆಸೆಯು ಕಾಡಿದೆ ದಿನವು,
ಬರುತಿರುವೆ ನಿನ್ನ
ದಾರಿಯಲ್ಲಿ ನಾ
ಕಾಯುವೆಯ ಕಿನ್ನರಿ??
ಇಂತಿ ನಿಮ್ಮವ ...
ನವಿ
* ಕೋಳಿ ಕುಗೊವಾಗ ಕತ್ತು ಕುಯೊರು
* ಕೆರೆ ಪಕ್ಕ ಒಂದು ಬಾವಿ ಇಡ್ತಾರೆ
* ಕತ್ತ್ಲಲ್ಲಿ ಕುಂತ್ಕೊಂಡು ಬೀಡಿ ಸೇದ್ತಾರೆ
* ಚಳಿ ಕಾಯಿಸ್ಕೋಳೊಕ್ಕೆ ಯಾರ್ ಮನೆ ಸುಟ್ರೆ ನಮ್ಗೆನು ಅಂತರೆ?
* ಬಾರ್ ಒಳಗಿದ್ದ ಗಂಡನ್ನ ಹಿಗ್ಗ ಮುಗ್ಗ ಹೊಡಿಯೊ ಹೆಂಗಸ್ರು
* ಹೊಡ್ಸ್ಕೊಂಡು ಮನೆಗೆ ಹೋದ್ಮ್ಯಾಲು ಮೈ ಕೈ ನೋವು ಅಂತ ಬಾರ್ ಕಡಿಕ್ಕೆ ಹೆಜ್ಜೆ ಹಾಕೊ ಗಂಡಸ್ರು
* ಖಾರ ಖಾರ ಅನ್ನೊ ಮೆಣಸಿನಕಾಯಿನ ರೊಟ್ಟಿ ಜೊತೆ ಸಲಿಸಾಗಿ ತಿನೊವ್ರು
* ಕೀಲಿ ಕೈ ಕಳೆದು ಹೋಯ್ತು ಅಂತ ಬಾಗಿಲು ಹೊಡಿಯೊರು
* ಕಾರು ಊರೊಳಿಕ್ಕೆ ಬಂತಂದ್ರೆ ಅದ್ರ ಹಿಂದೆ ಹತ್ತಾರು ಐಕ್ಳು
* ಮಾರಮ್ಮನ ಜಾತ್ರೆಗೆ ಮೈ ಮ್ಯಾಗೆ ಬರೊ ದೇವಿ
* ಬೇವಿನ್ ಸೊಪ್ಪು ಹಿಡ್ಕೊಂಡು ಆಕೆ ಸುತ್ತ ಕುಣ್ಣಿಯೊ ಭಕ್ತೆಯರು..
* ಒಬ್ರ ಮನೆಗೆ ಕಲರ್ ಟಿ.ವಿ ತಂದರೆ ಊರಿಗೆ ಹಬ್ಬ..
* ಯಾರಾದ್ರು ಸತ್ರೆ ತಮಟೆ ತರಿಸಿ ಎಳೆಯರಿಂದ ಗೆಳೆಯರವರೆಗು ಕುಣಿದು ಕುಪ್ಪಳಿಸುತಾರೆ
* ಮನೆ ದೀಪ ಆರಿಸಿ ಬೀದಿ ದೀಪದಲ್ಲಿ ಅಡುಗೆ ಮಾಡ್ತಾರೆ..
* ಪಕ್ಕದ ಮನೆಯವರ ಮನೆಲ್ಲಿ ಕುಳಿತು ಸಿರಿಯಲ್ ನೋಡ್ತಾರೆ.
ನಿಮ್ಮವ...
ನವಿ ..
ಗಂಡ ಹೆಂಡತಿ ಜಗಳವಾಡಿದ ಬಳಿಕ..
ಒಳ ಮನಸ್ಸು: ಅವಳೊಂದಿಗೆ ಮಾತಾಡು ಅವ್ಳು ಖಂಡಿತ ನಿನ್ನನು ಕ್ಷಮಿಸುತಾಳೆ..
ಬುದ್ದಿ: ಹೇ.. ಅಂತ ತಪ್ಪು ನೀನೇನು ಮಾಡಿಲ್ಲ ತಪಾಯ್ತು ಅಂತ ಕೇಳಿದರೆ ನಾಳೆ ಇಂದ ನೀನು ಅವಳ ಗುಲಾಮಾ..ಒಳ ಮನಸ್ಸು ಪಾಪ ಅಳುತ ಇದ್ದಾಳೆ..
ಬುದ್ದಿ: ಅತ್ತರೆ ಅಳುತಾಳೆ ಬಿಡು ಬುದ್ದಿ ಬರಲಿ..ಒಳ ಮನಸ್ಸು ಛೇ!! ಕಣ್ಣೀರು ಆದರು ಒರೆಸಬೇಕು ನಾನು ಬೇರೆ ಯಾರಿಗೋ ತಲೆ ಬಾಗುತ್ತಿಲ್ಲ ನನ್ನ ಹೆಂಡತಿ ಅಲ್ಲವಾ??
ಬುದ್ದಿ: ಹೋಗು ಒರೆಸು ಅಮೇಲೆ ಮಾತು ಕೇಳು ಆಹಾ.. ಈಗ ಬಂದುಬಿಟ್ರ ಕಣ್ಣೀರು ಒರೆಸೊಕ್ಕೆ.. ಬಯೋವಾಗ ಎಲ್ಲಿತ್ತೊ ಬುದ್ದಿ ಅಂತ..ಒಳ ಮನಸ್ಸು ಪಾಪ ನೊಂದಿದ್ದಾಳೆ ಸಮಾಧಾನಾ ಹೇಳಿಬರುತೇನೆ...
ಬುದ್ದಿ: ಹೋಗು ಹೋಗು.. ವಾಪಾಸು ಬರೊದಿಲ್ಲ ನೀನು.. ಕಟ್ಟಿ ಹಾಕ್ತಾಳೆ.ಒಳ ಮನಸ್ಸು ಹೋಗು ಹೋಗು..
ಬುದ್ದಿ: ಬೇಡ ಎದ್ದು ಹೊರಗೆ ಬಾ...
ಎದ್ದು ಹೊರಗೆ ಬಂದ ನಂತರ...
ಒಳ ಮನಸ್ಸು ಛೇ!! ಏಕೆ ನನ್ನ ಮಾತು ಕೇಳೊಲ್ಲ...
ಬುದ್ದಿ: ನಿನ್ನ ಮಾತು ಕೇಳಿದರೆ ಅಷ್ಟೇ..ಒಳ ಮನಸ್ಸು ಹೊರಗೆ ಬರಬಾರದಿತು...
ಬುದ್ದಿ: ಬಂದಿದು ಒಳೆದಾಯ್ತು ಆ ಕೆಟ್ಟ ಮುಖ ನೋಡೋದು ತಪ್ಪಿತುಒಳ ಮನಸ್ಸು ಅತೀ ಆಯ್ತು ಆ ಮುಖವನ್ನೆ ನೋಡಿ ನೀನು ಮದುವೆಗೆ ಒಪ್ಪಿದು ನಿನಗೆ ಅವಳು ಮುದ್ದಿಸೊಕ್ಕೆ ಬೇಕು ಊಟ ಮಾಡಿಸೊಕ್ಕೆ ಬೇಕು ಜೊತೆಯಲ್ಲಿ ನಡೆಯಲು ಬೇಕು ಇದೀಗ ಬೇಡವಾದಳಾ??
ಬುದ್ದಿ: ಅದು ಅದು..ಒಳ ಮನಸ್ಸು ಈಗಲಾದರು ಒಳಗೆ ಹೋಗಿ ಸಮಧಾನಾಪಡಿಸು...
ಬುದ್ದಿ: ಹೋಗಪ್ಪ ಇನ್ನು ನನ್ನ ಮಾತಿಗೆ ಬೆಲೆ ಇಲ್ಲ.... :(ಒಳ ಮನಸ್ಸು :) :) :)
ನಿಮ್ಮವ...
ನವಿ .. :)